ಕಲ್ಮಡ್ಕ:ಕಾಚಿಲ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಕೊಳ್ಳಿ ಮುಹೂರ್ತ

0

ಕಲ್ಮಡ್ಕ ಕಾಚಿಲ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಫೆ. 25 ಮತ್ತು 26 ರಂದು ನಡೆಯುವ ಒತ್ತೆಕೋಲ ನಡಾವಳಿಯ ಪ್ರಯುಕ್ತ ಜ.15 ರಂದು ಕೊಳ್ಳಿ ಮುಹೂರ್ತ ನಡೆಯಿತು.
ಶ್ರೀ ದೈವಗಳಿಗೆ ಸಂಕ್ರಮಣ ತಂಬಿಲ ಸೇವೆ ನಡೆದ ಬಳಿಕ ಕೊಳ್ಳಿ ಮುಹೂರ್ತ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ರಾಮಚಂದ್ರ ಎಡಪತ್ಯ, ಶ್ರೀ ಮಹಾವಿಷ್ಣು ಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಲೋಕಯ್ಯ ನಾಯ್ಕ ಬೊಳಿಯೂರು, ಸೇವಾ ಸಮಿತಿ ಸದಸ್ಯರು ಮತ್ತು ಊರ ಭಕ್ತಾದಿಗಳು ಉಪಸ್ಥಿತರಿದ್ದರು.