ಮೇದಿನಡ್ಕದಲ್ಲಿ ಪೊಂಗಲ್ ಆಚರಣೆ

0

ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ ಪೊಂಗಲ್ ಆಚರಣೆ ವಿಜೃಂಭಣೆಯಿಂದ ನಡೆಯಿತು.

ಡಿಸೆಂಬರ್ 17 ರ ಧನು ಮಾಸ 1ರಿಂದ ಶ್ರೀ ರಾಮ ದೇವರ ಭಜನೆ ನಿರಂತರ ಒಂದು ತಿಂಗಳ ಕಾಲ ಸ್ಥಳೀಯ ಭಕ್ತಾದಿಗಳ ವ್ರತಾಚಾರಣೆಯೊಂದಿಗೆ ನಡೆದು ಮಕರ ಸಂಕ್ರಾಂತಿಯಂದು ಕೊನೆಗೊಂಡಿತು. ಜ 15 ರಂದು ವಿಜೃಂಭಣೆಯ ಪೊಂಗಲ್ ಆಚರಣೆ ಪ್ರಯುಕ್ತ ದೇವರ ಪಲ್ಲಕ್ಕಿ ಉತ್ಸವ, ಮನೆ ಭಜನಾ ಸಂಕೀರ್ತನೆ ನಡೆದು ಬಳಿಕ ಮಧ್ಯಾಹ್ನ ಮಹಾಪೂಜೆಯೊಂದಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.