ಅಜ್ಜಾವರ : ಧನಲಕ್ಷ್ಮೀ ಮಹಿಳಾ ಮಂಡಲದಿಂದ ಮಕರ ಸಂಕ್ರಮಣ ಆಚರಣೆ

0

ಅಜ್ಜಾವರದ ಧನಲಕ್ಷ್ಮೀ ಮಹಿಳಾ ಮಂಡಲ ಇದರ ವತಿಯಿಂದ ಮಕರ ಸಂಕ್ರಮಣ ಕಾರ್ಯಕ್ರಮ ಜ.15ರಂದು ಅಜ್ಜಾವರದ ಶ್ರೀ ಶಂಕರಭಾರತಿ ವೇದಪಾಠ ಶಾಲೆಯಲ್ಲಿ ನಡೆಯಿತು.

ಧನಲಕ್ಷ್ಮೀ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ನಳಿನಾಕ್ಷಿ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಭಾಸ್ಕರ್ ರಾವ್ ಬಯಂಬು ಉದ್ಘಾಟಿಸಿದರು. ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಬಾಳಿಲ ಸತ್ಯಸಾಯಿ ಚೊಕ್ಕಾಡಿ ಇದರ ಆಧ್ಯಾತ್ಮಿಕ ಸಂಯೋಜಕಿ ಬೌದ್ದಿಕ ನೀಡಿದರು. ಕಾರ್ಯಕ್ರಮದಲ್ಲಿ ಜಯಂತಿ ಜನಾರ್ಧನ್ ಉಪಸ್ಥಿತರಿದ್ದರು. ಗೌರವಾಧ್ಯಕ್ಷರಾದ ಶ್ರೀಮತಿ ಶಶ್ಮಿ ಭಟ್, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಜ್ಜಾವರ ಇದರ ಅಧ್ಯಕ್ಷರಾದ ಹರಿಣಾಕ್ಷಿ ಎಸ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶಾಲ ಕರ್ಲಪ್ಪಾಡಿ ಪ್ರಾರ್ಥಿಸಿದರು. ಜಯಶ್ರೀ ಬೇಲ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು. ಕವಿತಾ ಸ್ವಾಗತಿಸಿದರು. ವೇದಾವತಿ ಅಡ್ಪಂಗಾಯ ವಂದಿಸಿದರು. ಸರ್ವ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.