ನಾರ್ಕೋಡು : ಸುಳ್ಯ ರೋಟರಿ ಸಿಟಿ ವತಿಯಿಂದ ಶೌಚಾಲಯ ನಿರ್ಮಾಣಕ್ಕೆ ಶಿಲಾನ್ಯಾಸ

0

ಸುಳ್ಯ ರೋಟರಿ ಸಿಟಿ ವತಿಯಿಂದ ನಾರ್ಕೋಡು ಶಾಲೆಗೆ ಶೌಚಾಲಯ ನಿರ್ಮಾಣಕ್ಕಾಗಿ ಶಿಲಾನ್ಯಾಸ ಕಾರ್ಯಕ್ರಮವು ಇಂದು ನಡೆಯಿತು.
ಉದ್ಯಮಿ ರೋ. ಹೇಮಂತ ಕಾಮತ್ ಶಿಲಾನ್ಯಾಸ ನೆರವೇರಿಸಿ, ಸಂಸ್ಥೆಗೆ ರೋಟರಿ ಗವರ್ನರ್ ಭೇಟಿ ಕಾರ್ಯಕ್ರಮದಂದು ಶೌಚಾಲಯ ಉದ್ಘಾಟನೆ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೋ. ಗಿರೀಶ್ ನಾರ್ಕೋಡ್ ಮಾತನಾಡಿ ರೋಟರಿ ಸದಸ್ಯರ ಸಹಕಾರ ದಿಂದ ಈ ಯೋಜನೆ ರೂಪಿಸಿರುವುದಾಗಿ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ತಾ.ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶಿಕ್ಷಕಿ ಆಶಾ ನಾಯಕ್ ರವರು ರೋಟರಿಯ ಕೊಡುಗೆಗೆ ಕೃತಜ್ಞತೆ ಅರ್ಪಿಸಿದರು. ಈ ಸಂದರ್ಭದಲ್ಲಿ ಸುಳ್ಯ ರೋಟರಿಯ ಮಾಜಿ ಅಧ್ಯಕ್ಷ ಜೆ.ಕೆ.ರೈ, ಶಾಲಾ ಮುಖ್ಯಶಿಕ್ಷಕಿ ಸುನಂದ, ರೋ ಮುಕುಂದ ನಾರ್ಕೋಡ್, ಸಿ ಆರ್ ಪಿ ಸವಿತಾ ಜಗದೀಶ್, ವಿಕ್ರಮ್ ಯುವಕ ಮಂಡಲದ ಅಧ್ಯಕ್ಷ ವಿನಯ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಕ್ಷಕ ಸುನಿಲ್ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಸುನಂದ ವಂದಿಸಿದರು.