ನಾಲ್ಕೂರು : ಹಲ್ಗುಜಿಯ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವಗಳ ನೇಮೋತ್ಸವ ಸಂಪನ್ನ

0

ನಾಲ್ಕೂರು ಗ್ರಾಮದ ಶ್ರೀ ಶಿರಾಡಿ ದೈವಸ್ಥಾನ ಹಲ್ಗುಜಿ ಕಲ್ಲಾಜೆ ಇಲ್ಲಿ ಜ.15 ಮತ್ತು ಜ.16 ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶಿರಾಡಿ ದೈವ ಮತ್ತು ಅಗ್ನಿಗುಳಿಗ ನೇಮೋತ್ಸವ ನಡೆಯಿತು.

ಮೊದಲ ದಿನ ಬೆಳಿಗ್ಗೆ ಗಣಹೋಮ, ದೈವಗಳಿಗೆ ತಂಬಿಲ ನಡೆದು ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು.

ಬಳಿಕ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಎಡಮಂಗಲ ವತಿಯಿಂದ ‘ಸರ್ಪ ಸಿರಿ ಮುಡಿ’ ಯಕ್ಷಗಾನ ಬಯಲಾಟ ನಡೆಯಿತು. ಜ.16 ರಂದು ಶ್ರೀ ಶಿರಾಡಿ ದೈವದ ನೇಮೋತ್ಸವ ನಡೆದು ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಅಪರಾಹ್ನ ಅಗ್ನಿಗುಳಿಗ ನೇಮೋತ್ಸವ ನಡೆಯಿತು. ಊರ ಪರವೂರ ಭಕ್ತರು ಪಾಲ್ಗೊಂಡರು. ಆಡಳಿತ ಮಂಡಳಿಯ ಸರ್ವಸದಸ್ಯರು ಕಾರ್ಯಕ್ರಮ ಯಶಸ್ವಿಗೆ ದುಡಿದರು.