ಹಿರಿಯರ ಕ್ರೀಡಾಕೂಟದಲ್ಲಿ ಮಕ್ಕಂಜದ ನವೀನ್ ಅಮೆಮನೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಮಂಗಳೂರಿನ ಮಂಗಳ ಸ್ಟೇಡಿಯಂನಲ್ಲಿ ಜನವರಿ 13 ಮತ್ತು 14 ರಂದು ನಡೆದ 42ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಮರ್ಕಂಜ ಗ್ರಾಮದ ಅಮೆಮನೆ ನವೀನ್ ಕುಮಾರ್ ರವರು ಭಾಗವಹಿಸಿ ಗುಂಡೆಸೆತ ಪ್ರಥಮ, ಈಟಿ ಎಸೆತ ದ್ವಿತೀಯ, ಲಾಂಗ್ ಜಂಪ್ ನಲ್ಲಿ ಪ್ರಥಮ ಪಡೆದು ಫೆಬ್ರವರಿಯಲ್ಲಿ ತಮಿಳುನಾಡಿನಲ್ಲಿ ನಡೆಯುವ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.