ಕೊಲ್ಲಮೊಗ್ರು: ಮಕ್ಕಳ ಗ್ರಾಮ ಸಭೆಗೆ ಶಾಲೆಯವರಿಗೆ ನೋಟೀಸ್ ನೀಡದಿರುವುದಕ್ಕೆ ಆಕ್ಷೇಪ

0

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನ ಮಕ್ಕಳ ಗ್ರಾಮ ಸಭೆ ಜ.10 ರಂದು ಮಯೂರ ಕಲಾ ಮಂದಿರದಲ್ಲಿ
ಕಲ್ಮಕಾರು ಶಾಲೆಗೆ ನೋಟೀಸ್ ನೀಡಿಲ್ಲ ಎಂದು ಎಸ್.ಡಿ.ಎಂ.ಸಿ ಯ ಅಧ್ಯಕ್ಷರು ಆಕ್ಷೇಪಿಸಿದ ಘಟನೆ ವರದಿಯಾಗಿದೆ.

ಗ್ರಾಮ ಸಭೆ ಆರಂಭವಾಗಿ ಇ‌ನ್ನೇನು ಚರ್ಚೆ ಆರಂಭವಾಗಬೇಕು ಅನ್ನುವಷ್ಟರಲ್ಲಿ ಕಲ್ಮಕಾರು ಹಿ.ಪ್ರಾ.ಶಾಲೆಯ ಎಸ್. ಡಿ.ಎಂ.ಸಿ ಅಧ್ಯಕ್ಷ ಶಿವಾನಂದ ಮತ್ತು ಮಾಜಿ ಗ್ರಾ.ಪಂ ಅಧ್ಯಕ್ಷೆ ವೀಣಾನಂದ ಅವರು ಕಲ್ಮಕಾರು ಶಾಲೆಗೆ ಮಕ್ಕಳ ಗ್ರಾಮ ಸಭೆಯ ನೋಟೀಸ್ ನೀಡಿರುವುದಿಲ್ಲ ಎಂದು ಆಕ್ಷೇಪಿಸಿದರು. ಅದಕ್ಕುತ್ತರಿಸಿದ ಗ್ರಾ.ಪಂ‌ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಶಾಲೆಗಳಿಗೆ ಪೋನ್ ಮಾಡಿ ತಿಳಿಸಲಾಗಿದೆ, ಅಲ್ಲದೆ ವಾಟ್ಸಾಪ್ ಮುಖಾಂತರ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ನೋಟೀಸ್ ಕೊಡುತ್ತೇವೆ ಎಂದರು. ಅದೇ ವೇಳೆ ಕೆ.ವಿ.ಜಿ.ಅ.ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಧನಂಜಯ ಅವರು ಇವತ್ತು ಮಕ್ಕಳ ಇಲ್ಲಿ ಕರೆದು ನಾವು ಇದರ ಬಗ್ಗೆ ವಿಪರೀತ ಮಾತನಾಡುವುದು ಸರಿಯಲ್ಲ ಇವತ್ತು ಸಭೆ ಮುಂದುವರೆಸೋಣ ಎಂದರು. ಇದಕ್ಕೆ ತೃಪ್ತರಾಗದ ಶಿವಾನಂದ ಅವರು ಸಭಾತ್ಯಾಗ ಮಾಡಿ ತೆರಳಿದರು. ಸಭೆ ಮುಂದುವರೆಯಿತು.

ಸಭೆಯ ಕೆ.ವಿ.ಜಿ, ಅ.ಪ್ರೌ. ಶಾಲೆಯ ವಿದ್ಯಾರ್ಥಿ ದಿಗಂತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೊಲ್ಲಮೊಗ್ರು ಗ್ರಾ.ಪಂ ನ ಅಧ್ಯಕ್ಷೆ ಜಯಶ್ರೀ ಚಾಂತಾಳ, ಉಪಾಧ್ಯಕ್ಷ ಅಶ್ವಥ್ ಯಾಲದಾಳು, ಸದಸ್ಯೆ ಮೋಹಿನಿ ಕಟ್ಟ, ನೊಡೆಲ್ ಅಧಿಕಾರಿಯಾಗಿ ಸಿ.ಡಿ.ಪಿ.ಒ ಇಲಾಖೆಯ ದೀಪಿಕಾ ಅವರಿದ್ದರು.