ಜನವರಿ 23 ರಂದು ಎಸ್ ಎಂ ಎ ಲೀಡ್ ಎನ್ ಗೈಡ್ ಮೀಟ್ ಪೇರೋಡ್ ಉಸ್ತಾದ್ ಆಗಮನ

0

ಮೊಹಲ್ಲಾ ಸಬಲೀಕರಣ ಮತ್ತು ಶೈಕ್ಷಣಿಕ ಕ್ಷೇತ್ರದ ಶ್ರೇಯಾಭಿವೃದ್ದಿಗಾಗಿ ಕಾರ್ಯಾಚರಿಸುತ್ತಿರುವ ಸುನ್ನೀ ಮಾನೇಜ್ ಮೆಂಟ್ ಅಸೋಸಿಯೇಶನ್ ಎಸ್ ಎಂ ಎ ಸುಳ್ಯ ರೀಜ್ಯನಲ್ ವತಿಯಿಂದ ಜಮಾಅತ್ ಮತ್ತು ಸಂಘ ಸಂಸ್ಥೆಗಳ ಸದಸ್ಯರುಗಳನ್ನು ಒಗ್ಗೂಡಿಸಿ ಜನವರಿ 23 ಮಂಗಳವಾರ ಮಧ್ಯಾಹ್ನ 2ಕ್ಕೆ ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ಸುಳ್ಯದಲ್ಲಿ ಲೀಡ್ ಎನ್ ಗೈಡ್ ಮೀಟ್ ಆಯೋಜಿಸಲಾಗಿದೆ.
ಖ್ಯಾತ ವಾಗ್ಮಿ ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಪೇರೋಡ್ ವಿಷಯ ಮಂಡಿಸಲಿರುವರು.ಪ್ರಮುಖ ಉಲಮಾ – ಉಮರಾಗಳು ಭಾಗವಹಿಸಲಿದ್ದಾರೆ.ಜಮಾಅತ್,ಮದ್ರಸ ಮತ್ತು ಸಂಘ ಸಂಸ್ಥೆಗಳ ಮಾದರೀ ಆಡಳಿತ,ಉತ್ತಮ ನಾಯಕತ್ವ ಗುಣ,ವೆಕ್ತಿತ್ವ ವಿಕಸನ ಮುಂತಾದ ಪ್ರಮುಖ ವಿಷಯಗಳ ಮುಂದಿರಿಸಿ ಆಯೋಜಿಸಲ್ಪಟ್ಟ ಪ್ರಸ್ತುತ ಲೀಡ್ ಎನ್ ಗೈಡ್ ಮೀಟ್ ನಲ್ಲಿ ಮಸೀದಿ,ಮದ್ರಸ ಆಡಳಿತ ಮಂಡಳಿ,ಅಸೋಸಿಯೇಶನ್ ಹಾಗೂ ಎಲ್ಲಾ ಸುನ್ನೀ ಸಂಘ ಸಂಸ್ಥೆಗಳ ಸದಸ್ಯರುಗಳು ಪ್ರತಿನಿಧಿಗಳಾಗಿ ಭಾಗವಹಿಸಿ ಸದುಪಯೋಗ ಪಡೆಯಲು ಎಸ್ ಎಂ ಎ ಸುಳ್ಯ ರೀಜ್ಯನಲ್ ಸಮಿತಿಯು ವಿನಂತಿಸಲಾಗಿದೆ.