ಪಡ್ಪಿನಂಗಡಿ: ಜಾಗೃತಿ ಜಾಥಾ ಅಭಿಯಾನ

0

ಪಡ್ಪಿನಂಗಡಿ ಪ್ರಾಥಮಿಕ ಶಾಲಾ ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮತ್ತು ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಪರಿಣಾಮಕಾರಿಯಾಗಿ ಗ್ರಾಮ ಪಂಚಾಯತಗಳಲ್ಲಿ ಅನುಷ್ಠಾನ ಮಾಡುವ ಉದ್ದೇಶದಿಂದ ಜಾಥಾ ಕಾರ್ಯಕ್ರಮವನ್ನು ನಡೆಸಿದರು.

ಜಾಥಾದಲ್ಲಿ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು, ಮಕ್ಕಳಿಗೆ ಶುದ್ಧ ಗಾಳಿ ಶುದ್ಧ ನೀರನ್ನು ಒದಗಿಸಿ, ಎಲ್ಲ ಮಕ್ಕಳಿಗೂ ಶಿಕ್ಷಣ ಕೊಡಿ, ಬಾಲ್ಯ ವಿವಾಹವನ್ನು ನಿಲ್ಲಿಸಿ, ಮಕ್ಕಳ ಬಾಲ್ಯವನ್ನು ಉಳಿಸಿ ಹಾಗೂ ಬಾಲ ಕಾರ್ಮಿಕತೆಯನ್ನು ತೊಳಗಿಸಿ ,ಎಲ್ಲರಿಗೂ ಸಿಗಲಿ ಶಿಕ್ಷಣದ ಹಕ್ಕು,ಮಕ್ಕಳ ಬೇಡಿಕೆಗಳನ್ನು ಈಡೇರಿಸಿ , ಡ್ರಗ್ಸ್ ತಂಬಾಕು ಸೇವನೆ ಬೇಡ ಎಂಬ ಹಲವಾರು ಘೋಷಣೆಗಳ ಮೂಲಕ ಜಾಥಾ ತೆರಳಿ ಸಮುದಾಯದಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯ ಮಹತ್ವದ ಬಗ್ಗೆ ಜಾಗೃತಿಯನ್ನು ಮೂಡಿಸಿದರು , ಚೈಲ್ಡ್ ರೈಟ್ ಟ್ರಸ್ಟ್ ಬೆಂಗಳೂರು ಇದರ ಸಂಯೋಜಕಿ ಶ್ರೀಮತಿ ಅಮೃತ ಹಾಗೂ ಮುಖ್ಯ ಶಿಕ್ಷಕಿ ಧರ್ಮವತಿ ಟಿ ಮತ್ತು ಸಹ ಶಿಕ್ಷಕಿಯರು ಹಾಗೂ ಕಲ್ಮಡ್ಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿ ಪ್ರಸಾದ್ ಮತ್ತು ಸಿಬ್ಬಂದಿ ವರ್ಗದವರು
ಭಾಗವಹಿಸಿ ಕಾರ್ಯಕ್ರಮದಲ್ಲಿ ಸಹಕರಿಸಿದರು.