ಅಡಿಕೆ ಎಲೆ ಚುಕ್ಕಿ ರೋಗ ಬಾಧೆ : ಡೆತ್‌ ನೋಟ್ ಬರೆದಿಟ್ಟು ಹಿಮ್ಮೇಳ ಕಲಾವಿದ ನಾರಾಯಣ ನಾಯಕ್‌ ತೋಟಚಾವಡಿ ಆತ್ಮಹತ್ಯೆ

0

ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆ ಮದ್ದಳೆ ವಾದಕರಾಗಿ ಪ್ರಸಿದ್ದರಾಗಿದ್ದ, ಕೃಷಿಕ, ಮರ್ಕಂಜ ಗ್ರಾಮದ ತೋಟಚಾವಡಿ ನಾರಾಯಣ ನಾಯಕ್ ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾರಾಯಣ ನಾಯಕ್‌ ರವರು ಉತ್ತಮ ಕೃಷಿಕರಾಗಿದ್ದರು. ಅಲ್ಲದೇ ಯಕ್ಷಗಾನ ಹಿಮ್ಮೇಳ ಕಲಾವಿದರಾಗಿ ಹೆಸರಾಗಿದ್ದರು.

ಇವರ ಇಬ್ಬರು ಪುತ್ರಿಯರನ್ನು ಮದುವೆ ಮಾಡಿ ಕೊಡಲಾಗಿತ್ತು. ಪತ್ನಿ ಮಗಳ ಮನೆಗೆ ಹೋಗಿದ್ದರು.

ಇಂದು ಮುಂಜಾನೆ ನಾರಾಯಣ ನಾಯಕ್ ರವರು ತಮ್ಮ ಮನೆ ಬಾಗಿಲು ತೆರೆಯದ ಕಾರಣ, ಪಕ್ಕದ ಮನೆಯವರು ಬಂದು ನೋಡಿದಾಗ ನಾರಾಯಣ ರವರು ನೇಣು ಬಿಗಿದು‌ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಉತ್ತಮ ಕೃಷಿಕರಾಗಿದ್ದ ಇವರು ಕಳೆದ ಕೆಲ ಸಮಯದಿಂದ ಅಡಿಕೆಗೆ ಹಳದಿ ರೋಗ ಬಾಧಿಸಿ ಸರ್ವನಾಶವಾಗಿದೆ. ರಬ್ಬರ್ ಇಳುವರಿ ಕುಂಟಿತವಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.