ಉಬರಡ್ಕ: ಕರಸೇವಕರಿಗೆ ಸನ್ಮಾನ

0

ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾ ಮಹೋತ್ಸವದ ಶುಭದಿನದಂದು 90 ರ ದಶಕದಲ್ಲಿ ಉಬರಡ್ಕ ಮಿತ್ತೂರು ಗ್ರಾಮದಿಂದ ಅಯೋಧ್ಯಗೆ ತೆರಳಿದ ಶಿವರಾಮ ಗೌಡ ಮಾಣಿಬೆಟ್ಟು, ಶ್ಯಾಮ್ ಪಾನತ್ತಿಲ, ಉಮೇಶ್ ಆಚಾರ್ಯ, ರಾಘವ ಪಾನತ್ತಿಲ, ಕುಶಲ ನೀರಬಿದಿರೆ, ಜಯರಾಮ ಪ್ರಭು ಕಕ್ಕೆಬೆಟ್ಟು ಇವರಿಗೆ ರಮೇಶ್ ಪಾನತ್ತಿಲ ಮತ್ತು ಹವೀನ್ ಉರುಂಡೆ ಇವರ ನೇತೃತ್ವದಲ್ಲಿ ಅವರವರ ಮನೆಗೆ ತೆರಳಿ ಗೌರವಿಸಿ ಜ.22 ರಂದು ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಪೂರ್ಣಿಮಾ ಪಾನತ್ತಿಲ, ಜಯಪ್ರಕಾಶ್ ಉರುಂಡೆ, ಹರಿಪ್ರಸಾದ್ ಪಾನತ್ತಿಲ, ತಸ್ಮಯ ಪಾನತ್ತಿಲ, ವಿಘ್ನೇಶ್ ಉರುಂಡೆ ಉಪಸ್ಥಿತರಿದ್ದರು.