ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದ ಮುಂಭಾಗದಲ್ಲಿ ಅಯೋಧ್ಯೆ ರಾಮಮಂದಿರ ಕಲಾಕೃತಿ ರಚನೆ

0

ಅಡ್ಕಾರಿನ ವೈ ಪೈ ಗೆಳೆಯರ ಬಳಗದ ಕೈಚಳಕದಲ್ಲಿ ಮೂಡಿಬಂದ ರಾಮಜನ್ಮಭೂಮಿಯ ಕಲಾಕೃತಿ

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಮುಂಭಾಗದಲ್ಲಿ ಅಯೋಧ್ಯೆಯ ಕಲಾಕೃತಿ ರಚಿಸಲಾಗಿದ್ದು, ಶಶಿ ಅಡ್ಕಾರು ನೇತೃತ್ವದ ಅಡ್ಕಾರಿನ ವೈ ಪೈ ಗೆಳೆಯರ ಬಳಗದವರ ಅದ್ಭುತ ಕೈಚಳಕದಲ್ಲಿ ಅಯೋಧ್ಯೆ ರಾಮಜನ್ಮಭೂಮಿಯ ಕಲಾಕೃತಿ ಮೂಡಿಬಂದಿದೆ.

ಬಟ್ಟೆಯನ್ನು ಬಳಸಿ ಕಲಾಕೃತಿ ರಚಿಸಲಾಗಿದ್ದು, ಶ್ರೀ ಆತ್ಮಾರಾಮ ಭಜನಾ ಮಂದಿರದ ಮುಂಭಾಗದಲ್ಲಿ ಅಳವಡಿಸಲಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.