ಕುಡೆಕಲ್ಲು ವಿಶ್ವನಾಥ ಗೌಡ ಮೈಂದೂರು ನಿಧನ

0

ಆಲೆಟ್ಟಿ ಗ್ರಾಮದ ಮೈಂದೂರಿನ ಕುಡೆಕಲ್ಲು ಮನೆತನದ ದಿ.ದಾಸಪ್ಪ ಗೌಡ ರವರ ಪುತ್ರ ಕುಡೆಕಲ್ಲು ವಿಶ್ವನಾಥ ಗೌಡ ಮೈಂದೂರು ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ವೇದಾವತಿ, ಪುತ್ರರಾದ ಕಿಶೋರ್ ಕುಡೆಕಲ್ಲು, ಬಿಪಿನ್ ಕುಡೆಕಲ್ಲು , ಸಹೋದರ ಸುಂದರ ಗೌಡ ಕುಡೆಕಲ್ಲು, ಸಹೋದರಿಯರಾದ ಶ್ರೀಮತಿ ದಮಯಂತಿ, ಶ್ರೀಮತಿ ರೇವತಿ, ಸೊಸೆಯಂದಿರಾದ ಶ್ರೀಮತಿ ಚೈತ್ರಾ, ಶ್ರೀಮತಿ ಸಹನಾ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ಪ್ರಸ್ತುತ ಕುಡೆಕಲ್ಲು ಕುಟುಂಬದ ವಿಷ್ಣುಮೂರ್ತಿ ದೈವಸ್ಥಾನದ ಆಡಳ್ತೆದಾರರಾಗಿದ್ದರು.