ಬೆಳ್ಳಾರೆ 108 ಆಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗು ಜನನ

0

ಬೆಳ್ಳಾರೆ 108 ಆಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗು ಜನನವಾದ ಘಟನೆ ಇಂದು ಮುಂಜಾನೆ 4 ಗಂಟೆಗೆ ನಡೆದಿದೆ‌.

108 ಆಂಬ್ಯುಲೆನ್ಸ್‌ನ ನರ್ಸ್ ದಕ್ಷಿಣಿ ಮುಗುಪ್ಪು ಮತ್ತು ಚಾಲಕ ರಾಜೇಶ್ ಕುಂಬಳಚೇರಿಯವರು ಬೆಳಗಿನಜಾವ 4 ಗಂಟೆಗೆ ಬಳ್ಪ ಸಮೀಪದ ಎಣ್ಣೆಮಜಲಿನ 21 ವರ್ಷದ ಬೇಬಿ ದೇವರಾಜ್ ಎಂಬವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಹನ ನಿಲ್ಲಿಸಿ ಮಹಿಳೆ ವಾಹನದಲ್ಲಿ ಸುರಕ್ಷಿತವಾಗಿ ಮಗುವನ್ನು ಹೆರಿಗೆ ಮಾಡುವಂತೆ ವ್ಯವಸ್ಥೆ ಮಾಡಿದರು.

ತಾಯಿ ಮತ್ತು ಮಗು ಸುರಕ್ಷಿತವಾಗಿದ್ದು, ತದನಂತರ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.