ಸುಳ್ಯಕ್ಕೆ ಪ್ರಥಮ ಬಾರಿಗೆ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದ ದ.ಕ.ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ತಮ್ಮ ತಂಡದ ಮೂಲಕ ಹಾಗೂ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಡಾ.ರೇಣುಕಾಪ್ರಸಾದ್ ಕೆ.ವಿ.ಯವರು ತಮ್ಮ ತಂಡದ ಮೂಲಕ ಪ್ರತ್ಯಪ್ರತೇಕವಾಗಿ ಭೇಟಿ ಮಾಡಿ ಗೌರವಿಸಿದರು.















ಸುಳ್ಯದ ಕೆ.ವಿ.ಜಿ. ಪುರಭವನದಲ್ಲಿ ಉಸ್ತುವಾರಿ ಸಚಿವರು ಜನತಾ ದರ್ಶನ ಕಾರ್ಯಕ್ರಮ ನಡೆಸುತ್ತಿದ್ದಲ್ಲಿಗೆ ಬಂದ ಡಾ.ಕೆ.ವಿ.ಚಿದಾನಂದರ ನೇತೃತ್ವದ ತಂಡ ಮೊದಲು ಆಗಮಿಸಿ ಸಚಿವರನ್ನು ಗೌರವಿಸಿದರು. ಬಳಿಕ ಡಾ.ರೇಣುಕಾಪ್ರಸಾದ್ ರವರು ತಮ್ಮ ತಂಡದೊಂದಿಗೆ ಬಂದು ಸಚಿವರನ್ನು ಗೌರವಿಸಿ ತೆರಳಿದರು.









