ಸುಳ್ಯ ಚರಂಡಿ ಸ್ಲಾಬ್ ಸಮಸ್ಯೆಗೆ ಸ್ಪಂದಿಸಿದ ನಗರ ಪಂಚಾಯತ್

0

ನಗರ ಪಂಚಾಯತ್ ಪೌರಕಾರ್ಮಿಕರಿಂದ ದುರಸ್ತಿ

ಸುಳ್ಯ ನಗರದ ಮುಖ್ಯರಸ್ತೆಯಲ್ಲಿ ಕೆಲವು ಕಡೆ ಚರಂಡಿ ಸ್ಲ್ಯಾಬುಗಳು ಕುಸಿದು ಬಿದ್ದಿರುವ ಬಗ್ಗೆ ಇಂದು ಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ,ಇದನ್ನು ಸರಿಪಡಿಸಿ ಕೊಡುವಂತೆ ಆಗ್ರಹಿಸಿ ಅದರ ಫೋಟೋಗಳನ್ನು ವಾಟ್ಸಪ್ ಗ್ರೂಪಿನಲ್ಲಿ ಹಾಕಲಾಗಿತ್ತು.

ಇದರ ಬಗ್ಗೆ ಸುದ್ದಿ ವೆಬ್ಸೈಟ್ ನಲ್ಲಿ ವರದಿ ಕೂಡ ಪ್ರಕಟಗೊಂಡಿತ್ತು.
ಇದೀಗ ಸಮಸ್ಯೆಗೆ ಸ್ಪಂದಿಸಿರುವ ಸುಳ್ಯ ನಗರ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಸಿಬ್ಬಂದಿಗಳನ್ನು ಕಳುಹಿಸಿ ಬಿದ್ದಿರುವ ಸ್ಲಾಬ್ಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಅಧಿಕಾರಿಗಳ ಸ್ಪಂದನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.