ಇಂದು ಶೇಣಿ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನೇಮೋತ್ಸವ

0

ಬೆಳಗ್ಗೆ ಗಣಪತಿ ಹವನ ತಂಬಿಲ ಸೇವೆ

ಅಮರಪಡ್ನೂರಿನ ಶೇಣಿ ಶ್ರೀ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಇಂದು ಶ್ರೀ ಬ್ರಹ್ಮ ಬೈದೇರುಗಳ ನೇಮೋತ್ಸವವು ನಡೆಯಲಿರುವುದು.

ಬೆಳಗ್ಗೆ ಪುರೋಹಿತ್ ಪ್ರದೀಪ್ ಶಾಂತಿ ಬಂಟ್ವಾಳ ನೇತೃತ್ವದಲ್ಲಿ ಗಣಪತಿ ಹವನವಾಗಿ ಬೈದೇರುಗಳಿಗೆ ಕಲಶಾಭಿಷೇಕ ತಂಬಿಲ ಪ್ರಸನ್ನ ಪೂಜೆಯು‌ ನೆರವೇರಿತು.
ಈ ಸಂದರ್ಭದಲ್ಲಿ ಅನುವಂಶಿಕ ಆಡಳ್ತೆದಾರ ಬಿ.ಕೆ ಧರ್ಮಪಾಲ ಶೇಣಿ, ಹೊನ್ನಪ್ಪ ಪೂಜಾರಿ, ಕೋಟಿ ಪೂಜಾರಿ, ತಿಮ್ಮಪ್ಪ ಪೂಜಾರಿ, ಶೇಖರ ಪೂಜಾರಿ ಉಪಸ್ಥಿತರಿದ್ದರು.

ಸಂಜೆ ದೈವಗಳ ಭಂಡಾರ ತೆಗೆದು ರಾತ್ರಿ ಬೈದೇರುಗಳು ಗರಡಿ ಇಳಿದು ಚೊಕ್ಕಾಡಿ ಶ್ರೀ ಉಳ್ಳಾಕುಲು ಪಾದಕ್ಕೆ ಕಾಣಿಕೆ ಅರ್ಪಿಸಿ ಮಾನಿಬಾಲೆ ಗರಡಿ ಇಳಿದು ಧರ್ಮ ಚಾವಡಿಗೆ ಬಂದು ಹಾಲು ಕುಡಿಯುವುದು.

ನಾಳೆ
ಪ್ರಾತ:ಕಾಲ 4.00 ಗಂಟೆಗೆ ಕೋಟಿ ಚೆನ್ನಯ ರ ದರ್ಶನ ನಂತರ ಬೈದೇರುಗಳ ಸೇಟು ನಡೆದು ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಲಿರುವುದು.