ಅಗೋಲಿಬೈಲು – ಪಲ್ಲತ್ತಡ್ಕ ರಸ್ತೆ ಫಲಾನುಭವಿಗಳಿಂದ ವಿನೋದ್ ಬೊಳ್ಮಲೆಯವರಿಗೆ ಸನ್ಮಾನ ಕಾರ್ಯಕ್ರಮ

0

ಬಳ್ಪ ಗ್ರಾಮದ ಶ್ರೀಮತಿ ಲೋಕೇಶ್ವರಿ ತಿಮ್ಮಪ್ಪ ಗೌಡ ಪಲ್ಲತ್ತಡ್ಕ ರವರ ಮನೆಯಲ್ಲಿ ಅಗೋಲಿಬೈಲು – ಪಲ್ಲತ್ತಡ್ಕ ರಸ್ತೆ ಫಲಾನುಭವಿಗಳಿಂದ ಸನ್ಮಾನ ಕಾರ್ಯಕ್ರಮ ಜ.23 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರದ ಕುಶಾಲಪ್ಪ ಗೌಡ ಅಗೋಳಿಬೈಲು ವಹಿಸಿದ್ದರು, ಪ್ರಕಾಶ್ ಆಚಾರ್ಯ ನರಿಯುಂಗ, ಹಾಗೂ ಹುಕ್ರಪ್ಪ ಗೌಡ ಪಲ್ಲತ್ತಡ್ಕ ಮತ್ತು ಬಳ್ಪ ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ್ ಆಕ್ಕೇನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರಸ್ತುತ ಸಂಸದರ ಆದರ್ಶ ಗ್ರಾಮ ಯೋಜನೆಯ ಅದೆಷ್ಟೋ ಯೋಜನೆಗಳನ್ನು ಕಾರ್ಯರೂಪಕ್ಕೆ ತರವಲ್ಲಿ ಶ್ರಮ ವಹಿಸಿದ, ವಿಶೇಷವಾಗಿ ಅಗೋಲಿ ಬೈಲು – ಪಲ್ಲತ್ತಡ್ಕ ರಸ್ತೆಗೆ ಸುಮಾರು 1 ಕೋಟಿಗೂ ಅಧಿಕ ಅನುದಾನದಲ್ಲಿ ರಸ್ತೆ ಕಾಂಕ್ರೀಟೀಕರಣಗೊಳಿಸಿದಲ್ಲದೆ, ಬಳ್ಪ- ಕೇನ್ಯ ಗ್ರಾಮಗಳಿಗೆ ವಿವಿಧ ರೀತಿಯ ಅನುದಾನ ತರುವಲ್ಲಿ ಶ್ರಮಿಸಿದ ವಿನೋದ್ ಬೊಳ್ಮಲೆ ಯವರಿಗೆ ಊರವರಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ
ಚಿನ್ಮಯ್ ಪಲ್ಲತ್ತಡ್ಕ ಪ್ರಾರ್ಥಿಸಿದರು, ಪವನ್ ಪಲ್ಲತ್ತಡ್ಕ ಪ್ರಸ್ತಾವಿಕ ಮಾತುಗಳನಾಡಿ ಸ್ವಾಗತಿಸಿದರು, ಗಣೇಶ್ ಬೊಳ್ಮಲೆ ನಿರೂಪಿಸಿದರು,
ಪ್ರಶಾಂತ್ ಪಲ್ಲತ್ತಡ್ಕ ವಂದಿಸಿದರು.