ಬೆಳ್ಳಾರೆ ಕೆಪಿಎಸ್ ನಲ್ಲಿ ಗಣರಾಜ್ಯೋತ್ಸವ ಮತ್ತು ದತ್ತಿ ನಿಧಿ ವಿತರಣಾ ಸಮಾರಂಭ

0

ಕೆಪಿಎಸ್ ಬೆಳ್ಳಾರೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ ಮತ್ತು
ದತ್ತಿನಿಧಿ ವಿತರಣಾ ಸಮಾರಂಭ ಜ.26 ರಂದು ನಡೆಯಿತು. ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾದ ಶ್ರೀನಾಥ್ ರೈ ಅವರು ಧ್ವಜಾರೋಹಣಗೈದು ಶುಭಹಾರೈಸಿದರು. ಗ್ರಾಮ ಪಂಚಾಯತ್ ಬೆಳ್ಳಾರೆಯ ಅಧ್ಯಕ್ಷರಾದ ನಮಿತಾ ಎಲ್ ರೈ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಜನಾರ್ಧನ ಕೆ ಎನ್ ವಹಿಸಿದರು. ಪೂರ್ವವಿದ್ಯಾರ್ಥಿಗಳಾದ ಪ್ರಸಾದ್ ಸೇವಿತ ತಮ್ಮ ಗುರುಗಳಾದ ದಿ. ನಾರಾಯಣ ರೈ ಇವರ ಸ್ಮರಣಾರ್ಥ ನೀಡುವ ದತ್ತಿನಿಧಿ ವಿತರಿಸಿ ತಮ್ಮ ಶಾಲಾದಿನಗಳನ್ನು ನೆನಪಿಸುತ್ತಾ ಸಂಸ್ಥೆಯ ಬೆಳವಣಿಗೆ, ಸಾಧನೆಯ ಬಗ್ಗೆ ಪ್ರೋತ್ಸಾಹದ ನುಡಿಯನ್ನಾಡಿದರು. ಎಸ್.ಡಿ.ಎಂ.ಸಿ ಸದಸ್ಯರಾದ ವಸಂತ ಉಲ್ಲಾಸ್ ಶುಭಹಾರೈಸಿದರು. ವೇದಿಕೆಯಲ್ಲಿ ಪೂರ್ವ ವಿದ್ಯಾರ್ಥಿ ರೊ.ಶಶಿಧರ ಉಪಸ್ಥಿತರಿದ್ದರು.


ಪ್ರೌಢ ಮತ್ತು ಪದವಿಪೂರ್ವ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ವಿತರಿಸಲಾಯಿತು. ಉಪಪ್ರಾಂಶುಪಾಲರಾದ ಉಮಾಕುಮಾರಿ ಸ್ವಾಗತಿಸಿದರು. ನೇವಲ್ ಎನ್.ಸಿ. ಸಿ ಘಟಕಾಧಿಕಾರಿಯಾದ ರಾಮಚಂದ್ರ ಭಟ್ ಎಂ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆಗೈದರು. ಉಪನ್ಯಾಸಕರು, ಶಿಕ್ಷಕವೃಂದದವರೆಲ್ಲರೂ ಸಹಕರಿಸಿದರು.