ಅಟೋ ಚಾಲಕ ದಿ.ಮೋಹನ ಗೌಡ ಕೊರಂಬಡ್ಕರ ಶ್ರದ್ಧಾಂಜಲಿ ಕಾರ್ಯಕ್ರಮ

0

ಅಜ್ಜಾವರ ಗ್ರಾಮದ ಬಸವನಪಾದೆ ನಿವಾಸಿ ಅಟೋ ಚಾಲಕರಾಗಿದ್ದ ಜ.19 ರಂದು ನಿಧನರಾದ ಕೊರಂಬಡ್ಕ ಮೋಹನ ಗೌಡ ಕೊರಂಬಡ್ಕ ರವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಜ.29 ರಂದು ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.


ನಗರ ಪಂಚಾಯತ್ ಮಾಜಿ ಸದಸ್ಯೆ ಪ್ರೇಮಾ ಟೀಚರ್ ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು. ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಮಾತನಾಡಿದರು. ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು.


ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಯಶೋಧ, ಪುತ್ರ ಮುರಳೀಧರ, ಪುತ್ರಿ ಮೀರಾ, ಸೊಸೆ ರಶ್ಮಿ, ಅಳಿಯ ದಯಾನಂದ, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರು ಉಪಸ್ಥಿತರಿದ್ದರು.