ಅರಂತೋಡು ಜಮಾಅತ್ ಸೌದಿ ಸಮಿತಿ ವಾರ್ಷಿಕ ಮಹಾಸಭೆ

0

ಅರಂತೋಡು ಜಮಾಅತ್ ಸೌದಿ ಸಮಿತಿಯ ವಾರ್ಷಿಕ ಮಹಾ ಸಭೆಯ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಗೂನಡ್ಕ ರವರ ಅಧ್ಯಕ್ಷತೆಯಲ್ಲಿ ಜ. 20 ರಂದು ಸೌಧಿ ಅರೇಬಿಯಾದ ದಮ್ಮಾಮ್ ನಲ್ಲಿರುವ ಅಬ್ದುಲ್ ಅಝೀಝ್ ಗೂನಡ್ಕ ರವರ ನಿವಾಸದಲ್ಲಿ ನಡೆಯಿತು.

ಬಹು| ಅಝರ್ ಅಝ್ ಹರಿ ದುವಾ ನೆರೆವೇರಿಸಿದರು. ಪ್ರಧಾನ ಕಾರ್ಯದರ್ಶಿ ಇಸಾಕ್ ಅರಂತೋಡು ಸ್ವಾಗತಿಸಿ ಲೆಕ್ಕ ಪತ್ರಗಳನ್ನು ಮಂಡಿಸಿದರು. ಗೌರವಾಧ್ಯಕ್ಷ ಮೊಹಮ್ಮದ್ ಕಮಲ್ ಮಾತನಾಡಿ ನಮ್ಮ ಸಮಿತಿಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ನಾವು ಇದ್ದರು ಗರಿಷ್ಟ ಮೊತ್ತದ ಸಹಾಯ ಮಾಡಿದ ತ್ರಪ್ತಿ ನಮಗಿದೆ.

ಮತ್ತು ಜಮಾಅತ್ ನಲ್ಲಿರುವ ಅರ್ಹ ಬಡವರಿಗೋಸ್ಕರ ಪಂಚ ಯೋಜನೆಯನ್ನು ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದರು. ಸಭೆಯಲ್ಲಿ ನೂತನ ಸಾಲಿಗೆ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮೊಹಮ್ಮದ್ ಕಮಾಲ್ ಪಾರೆಕ್ಕಲ್, ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಗೂನಡ್ಕ , ಪ್ರಧಾನ ಕಾರ್ಯದರ್ಶಿಯಾಗಿ ಇಸಾಕ್ ಅರಂತೋಡು, ಕೋಶಾಧಿಕಾರಿಯಾಗಿ ಹಬೀಬ್ ಗುಂಡಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಜಾವೇದ್ ಪೆಲ್ತಡ್ಕ, ನಿರ್ದೇಶಕರಾಗಿ ಸಾಲಿ ಅರಂತೋಡು, ರವೂಫ್ ಕೊಡಂಕೇರಿ ಹಾಗು ಗೌರವ ಸಲಹೆಗಾರರಾಗಿ ಬಹು| ಅಝರ್ ಅಝ್ ಹರಿ ಉಸ್ತಾದ್ ಇವರುಗಳು ಪುನರಾಯ್ಕೆಗೊಂಡರು.