ಎಡಮಂಗಲ : ಮಾಲೆಂಗ್ರಾಯ ಗ್ರಾಮ ದೈವ ಮತ್ತು ಅನಾದಿ ಶ್ರೀ ದೈವಗಳ ನೇಮೋತ್ಸವ

0

ಎಡಮಂಗಲ ಪಿಲಿಕುಂಜ ಸ್ಥಾನಗಳ ಸನ್ನಿಧಿಯಲ್ಲಿ ವರ್ಷಾವಧಿ ಶ್ರೀ ಮಾಲೆಂಗ್ರಾಯ ಗ್ರಾಮ ದೈವ ಮತ್ತು ಅನಾದಿ ಶ್ರೀ ದೈವಗಳ ನೇಮೋತ್ಸವು 29 ರಿಂದ 30 ವರೆಗೆ ನಡೆಯಿತು.

29ರಂದು ಬೆಳಿಗ್ಗೆ ಗಣಪತಿ ಹವನ, ಕಲಶ ಪೂಜೆ, ಕಲಶಾಭಿಷೇಕ , ತಂಬಿಲ ಸೇವೆ ,ನಾಗ ತಂಬಿಲ ನಡೆದು, ರಾತ್ರಿ ಭಂಡಾರ ತೆಗೆದು, ಉಳ್ಳಾಕುಲು , ಉಳ್ಳಾಲ್ತಿ, ಪುರುಷರಾಯ, ಪಿಲಿಬೂತ, ರುದ್ರಾಣಿ , ರಕ್ತೇಶ್ವರಿ , ಸತ್ಯದೇವತೆ, ಪಾಷಾಣಮೂರ್ತಿ , ಸಪರಿವಾರ ದೈವಗಳ ನೇಮ ನಡೆಯಿತು.

30ರಂದು ಬೆಳಿಗ್ಗೆ ಮಾಲೆಂಗ್ರಾಯ ಮತ್ತು ಅಣ್ಣಪ್ಪ ಪಂಜುರ್ಲಿ ದೈವಗಳ ನೇಮ ಅಭಯ ನುಡಿ, ಕೈಕಾಣಿಕೆ ಸೇವೆ, ಬೂಲ್ಯ ಪ್ರಸಾದ ವಿತರಣೆ , ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಮಾಲೆಂಗಿರಿ ಕುಟುಂಬದ ಸದಸ್ಯರಾದ ರಾಮಕೃಷ್ಣ ರೈಯವರ ಮನಃಪೂರ್ವಕ ಪ್ರಾರ್ಥನೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮಾಲೆಂಗಿರಿ ಕುಟುಂಬದ ಸದಾಶಿವ ರೈ ಮತ್ತು ಮನೆಯವರು ಕೂಡುಕಟ್ಟಿನ ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು.