ರೆಂಜಾಳ ಜಾತ್ರೋತ್ಸವ – ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ‌ ರಂಜಿಸಿದ ರೆಂಜಾಳ ಮ್ಯೂಸಿಕಲ್ ನೈಟ್ಸ್ – 2024

0

ನಿರೂಪಣೆಯ ಮೂಲಕ ಪ್ರೇಕ್ಷರನ್ನು ನಗೆಯಲ್ಲಿ ತೇಲಿಸಿದ ಹಾಸ್ಯ ಕಲಾವಿದ ಮಂಜು ರೈ ಮೂಳೂರು

ಇಂದು ನೃತ್ಯಬಲಿ – ಸಿಡಿಮದ್ದು ಪ್ರದರ್ಶನ – “ಶಾಂಭವಿ” ನಾಟಕ ಪ್ರದರ್ಶನ

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲಿ‌ ಒಂದಾದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ದಲ್ಲಿ ವಾರ್ಷಿಕ ಜಾತ್ರೋತ್ಸವ ಸಂಭ್ರಮದಿಂದ ನಡೆಯುತ್ತಿದ್ದು, ನಿನ್ನೆ ಸಂಜೆ ತಂತ್ರಿಗಳ ಆಗಮನವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು‌ ನಡೆಯಿತು.‌

ಸಂಜೆ ಮಿತ್ತಡ್ಕ, ದಾಸರಬೈಲು, ಬೊಳ್ಳಾಜೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ರಂಜಿಸಿದ ರೆಂಜಾಳ ಮ್ಯೂಸಿಕಲ್ ನೈಟ್ಸ್

ರಾತ್ರಿ ಶ್ರೀ ದೇವರಿಗೆ ಮಹಾಪೂಜೆ ನಡೆದ ಬಳಿಕ ಶೃತಿ ಗಾಯನ ಮೆಲೋಡಿಸ್ ರವರಿಂದ ರೆಂಜಾಳ ಮ್ಯೂಸಿಕಲ್ ನೈಟ್ಸ್ – 2024 ನಡೆಯಿತು.

ಹಾಸ್ಯ ಕಲಾವಿದ ಮಂಜು ರೈ ಮೂಳೂರು ಕಾರ್ಯಕ್ರಮದ ನಿರೂಪಣೆ ಮಾಡಿ ಕಾರ್ಯಕ್ರಮದ ಉದ್ದಕ್ಕೂ ಪ್ರೇಕ್ಷಕರನ್ನು ನಗೆಯಲ್ಲಿ ತೇಲಿಸಿದರು. ಮರ್ಕಂಜದ ಹರ್ಷಿತ್ ಮಿತ್ತಡ್ಕ ನೇತೃತ್ವದಲ್ಲಿ ರೆಂಜಾಳ ಮ್ಯೂಸಿಕಲ್ ನೈಟ್ಸ್ ನಡೆಯಿತು.‌

ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನಾ ಸೇವೆ ನಡೆಯಲಿದೆ. ರಾತ್ರಿ 7ಕ್ಕೆ ಪೂಜೆ ನಡೆದ ಬಳಿಕ ನೃತ್ಯ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ :
ಸಂಜೆ ರೆಂಜಾಳ, ದಾಸರಬೈಲು, ಬೊಳ್ಳಾಜೆ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ರಸಸಂಜೆ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಮುದ್ದು ಪುಟಾಣಿ ಕು| ಪ್ರಣನ್ಯ ಕುದ್ಪಾಜೆ ಇವರಿಂದ “ನೃತ್ಯ ವೈಭವ” ನಡೆಯಲಿದೆ.

ರಾತ್ರಿ ಉತ್ಸವದ ಬಳಿಕ ಸುಳ್ಯ ತಾಲೂಕಿನಲ್ಲಿ ಪ್ರಪ್ರಥಮ ಭಾರಿಗೆ ಅಭಿನಯ ಕಲಾವಿದರು ಉಡುಪಿ ಅಭಿನಯಿಸುವ ಸಾಮಾಜಿಕ‌ ತುಳು ಹಾಸ್ಯಮಯ “ಶಾಂಭವಿ” ನಾಟಕ ಪ್ರದರ್ಶನ ಗೊಳ್ಳಲಿದೆ.

ಹಾಗೂ ಉತ್ಸವದ ಸಂದರ್ಭದಲ್ಲಿ ವಿಪ್ರ ವೇದಿಕೆ ಮರ್ಕಂಜದ ವತಿಯಿಂದ ರೆಂಜಾಳ ಕ್ಷೇತ್ರದಲ್ಲಿ ಪ್ರಥಮ‌ ಬಾರಿಗೆ ಸಿಡಿಮದ್ದು ಪ್ರದರ್ಶನ ನಡೆಯಲಿದೆ.