ವಿಜೃಂಭಣೆಯಿಂದ ನಡೆದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ಜಾತ್ರಾ ಮಹೋತ್ಸವ

0

ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವವು ಜ.30 ರಂದು ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ದೇವತಾ ಪ್ರಾರ್ಥನೆ,ಮಹಾಗಣಪತಿ ಹೋಮ,ಶುದ್ಧಿ ಕಲಶ ನಡೆಯಿತು.


ನಂತರ ಬೆಳಂದೂರು ವಲಯದ ವಿಷ್ಣುಪ್ರಿಯ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಮಧ್ಯಾಹ್ನ ಮಹಾಪೂಜೆ ನಡೆದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಸಾಯಂಕಾಲ ರಂಗಪೂಜೆ,ಮಹೋತ್ಸವ,ದರ್ಶನ ಬಲಿ,ಬಟ್ಟಲು ಕಾಣಿಕೆ,ಮಂತ್ರಾಕ್ಷತೆ ನಡೆಯಿತು.ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.


ಬಳಿಕ ಗುಳಿಗ,ಪಂಜುರ್ಲಿ,ಶಿರಾಡಿ ದೈವಗಳ ನೇಮೋತ್ಸವ ಭಕ್ತಿ,ಸಂಭ್ರಮದಿಂದ ನಡೆಯಿತು.


ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಎಂ.ಕೆ.ಬಾಲಚಂದ್ರ ರಾವ್,ಉತ್ಸವ ಸಮಿತಿ ಅಧ್ಯಕ್ಷರಾದ ದಯಾನಂದ ಗೌಡ ಜಾಲು ಮತ್ತು ಸದಸ್ಯರು, ಮೊಕ್ತೇಸರರಾದ ದಯಾಕರ ಆಳ್ವ ಬೋಳಕುಮೇರು, ಡಾ.ನರಸಿಂಹ ಶರ್ಮ ಕಾನಾವು,ವಸಂತ ಬೈಪಾಡಿತ್ತಾಯ ಮುಕ್ಕೂರು, ಅರ್ಚಕ ಸುರೇಶ ಉಪಾಧ್ಯಾಯ , ಕುಶಾಲಪ್ಪ ಗೌಡ ಪೆರುವಾಜೆ,ಶ್ರೀಮತಿ ಸುಜಾತ ವಿ.ರಾಜ್.ಕಜೆ, ಶ್ರೀಮತಿ ಪುಷ್ಪಾವತಿ ಎಂ.ಕಂಡಿಪ್ಪಾಡಿ, ಕೃಷ್ಣಪ್ಪ ನಾಯ್ಕ ದೇವಿಮೂಲೆ, ಊರಿನ ಹತ್ತು ಸಮಸ್ತರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.