ಸುಳ್ಯ ಜಿ.ಪಂ. ಇಂಜಿನಿಯರಿಂಗ್ ಇಲಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

0

ಸುಳ್ಯದ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಹಳೆ ಕಚೇರಿ ಕಟ್ಟಡ ಇದ್ದ ಜಾಗದಲ್ಲಿ ಹೊಸಕಟ್ಟಡ ನಿರ್ಮಿಸುವ ಕಾಮಗಾರಿಗೆ ಗುದ್ದಲಿಪೂಜೆ ಇಂದು ನೆರವೇರಿತು. 1 ಕೋಟಿ 65 ಲಕ್ಷ ರೂ. ವೆಚ್ಚದ ಈ ಕಟ್ಟಡ ಕಾಮಗಾರಿಗೆ ಶಾಸಕಿ ಕು. ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.

ಪುರೋಹಿತ ಆಲಂಗಾರು ಹರೀಶ್ ಭಟ್‌ರವರ ಪೌರೋಹಿತ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಎಇಇ ರುಕ್ಮಾಂಗದರವರು ಅಲ್ಲದೆ, ಇಂಜಿನಿಯರ್‌ಗಳಾದ ಜನಾರ್ದನ, ಮಣಿಕಂಠ ಮತ್ತು ಇಲಾಖೆಯ ಸಿಬ್ಬಂದಿಗಳು ಸುಳ್ಯ ನ.ಪಂ. ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ ಕಂಟ್ರಾಕ್ಟರ್ ರವಿಪ್ರಸಾದ್ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.