ಅರಂತೋಡು: ಅಕ್ರಮ ಮರಳುಗಾರಿಕೆ

0

ಟಿಪ್ಪರ್ ವಶ; ಚಾಲಕ ಪರಾರಿ

ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಸುಳ್ಯ ಪೊಲೀಸರು ದಾಳಿ ನಡೆಸಿ ಮರಳು ಸಮೇತ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದು ಪೊಲೀಸರು ದಾಳಿ ನಡೆಸಿದ ಸಮಯ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಜ. ೩೦ರಂದು ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಸಿಬ್ಬಂದಿಗಳ ಜೊತೆ ಅರಂತೋಡು ಕಡೆಗೆ ತೆರಳುತ್ತಿದ್ದ ಸಂದರ್ಭ ನೂಜಿಕಲ್ಲು ಎಂಬಲ್ಲಿ ತೋಡಿನಿಂದ ಮರಳನ್ನು ತೆಗೆದು ಟಿಪ್ಪರ್ ಲಾರಿಗೆ ಲೋಡ್ ಮಾಡುತ್ತಿರುವುದು ಕಂಡು ಬಂದಿದೆ.

ಈ ವೇಳೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ ಸಂದರ್ಭ ಯಾವುದೇ ಪರವಾನಿಗೆ ಇಲ್ಲದೇ ಮರಳು ತೆಗೆಯುವುದು ಪತ್ತೆಯಾಗಿದ್ದು, ಪೊಲೀಸರು ಮರಳು ಸಮೇತ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ಸಂದರ್ಭ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಟಿಪ್ಪರ್ ಲಾರಿ ಮೌಲ್ಯ ೫ ಲಕ್ಷ ರೂ. ಹಾಗೂ ಮರಳಿನ ಮೌಲ್ಯ ೫ ಸಾವಿರ ರೂ. ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.