ಬೆಳ್ಳಾರೆ ಗ್ರಾಮ ಪಂಚಾಯತ್ ವಿಶೇಷ ಚೇತನರ ಗ್ರಾಮ ಸಭೆ

0

ವಿಶೇಷ ಚೇತನರಿಗೆ ಸ್ಪರ್ಧೆ – ಬಹುಮಾನ ವಿತರಣೆ

ಬೆಳ್ಳಾರೆ ಗ್ರಾಮ ಪಂಚಾಯತ್ ವಿಶೇಷ ಚೇತನರ ಗ್ರಾಮ ಸಭೆಯು ಫೆ.03 ರಂದು ಗ್ರಂಥಾಲಯದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಕೆ.ಎಲ್.ಅಧ್ಯಕ್ಷತೆ ವಹಿಸಿದ್ದರು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಪುಷ್ಪಶ್ರೀ ಯವರು ಮಾಹಿತಿ ನೀಡಿದರು.


ಚೈಲ್ಡ್ ರೈಟ್ ಟ್ರಸ್ಟ್ ತಾಲೂಕು ಸಂಯೋಜಕಿ ಅಮೃತರವರು ಮಾಹಿತಿ ನೀಡಿದರು.
ವಿಶೇಷ ಚೇತನರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವೀಣಾ ಮೂಡಾಯಿತೋಟ,ಸದಸ್ಯ ಮಣಿಕಂಠ, ಲೆಕ್ಕ ಸಹಾಯಕಿ ಶ್ರೀಮತಿ ಸುಶೀಲ ಉಪಸ್ಥಿತರಿದ್ದರು.
ಗ್ರಂಥಪಾಲಕಿ ಶಶಿಕಲಾರವರು ವಂದಿಸಿದರು.