ಶತಮಾನದ ಸಂಭ್ರಮದಲ್ಲಿ ಕಂದ್ರಪ್ಪಾಡಿ ಸರಕಾರಿ ಶಾಲೆ

0

ವಿವಿಧ ಅಭಿವೃದ್ಧಿ ಕಾರ್ಯಗಳೊಂದಿಗೆ ಫೆ.8ರಂದು ಅದ್ದೂರಿಯ ಕಾರ್ಯಕ್ರಮ

ವಿವಿಧ ಗಣ್ಯರು ಭಾಗಿ – ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ-ಸೇವೆಗೈದ ಶಿಕ್ಷಕರಿಗೆ ಸನ್ಮಾನ

ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಯವರಿಂದ ಪತ್ರಿಕಾಗೋಷ್ಠಿ

1924ರಲ್ಲಿ ಆರಂಭವಾದ ಕಂದ್ರಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಇದರ ಸವಿನೆನಪಿಗಾಗಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಫೆ.8ರಂದು ಶತಮಾನೋತ್ಸವ ಕಾರ್ಯಕ್ರಮ
ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.

ಅವರು ಇಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಬೆಳಿಗ್ಗೆ ಬಾಲಕೃಷ್ಣ ಮಾಸ್ತರ್ ಹಿರಿಯಡ್ಕ ಧ್ವಜಾರೋಹಣ ಮಾಡಲಿದ್ದಾರೆ. ಶತಮಾನೋತ್ಸವದ ಮೆರವಣಿಗೆಯನ್ನು ಚಂದ್ರಶೇಖರ ಕಂದ್ರಪ್ಪಾಡಿ ಉದ್ಘಾಟಿಸಲಿದ್ದಾರೆ.

ಪೂರ್ವಾಹ್ನ ಗಂಟೆ 10.30ರಿಂದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಗಳ ಉದ್ಘಾಟನೆ ನಡೆಯಲಿದೆ.
ನವೀಕೃತ ತರಗತಿ ಕೊಠಡಿ ಉದ್ಘಾಟನೆಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನೂತನ ರಂಗಮಂದಿರವನ್ನು ಉದ್ಘಾಟನೆಯನ್ನು ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ.
ಹರೀಶ್ ಕುಮಾರ್ ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ. ಶಿಕ್ಷಕರ ವಸತಿಗೃಹವನ್ನು ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡ ಉದ್ಘಾಟಿಸಲಿದ್ದಾರೆ.


ಇಂಟರ್ ಲಾಕ್ ಉದ್ಘಾಟನೆ ಯನ್ನು ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಉದ್ಘಾಟಿಸಲಿದ್ದಾರೆ.
ಆವರಣಗೋಡೆಯನ್ನು ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಉದ್ಘಾಟಿಸಲಿದ್ದಾರೆ. ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸೇವೆಗೈದ ಶಿಕ್ಷಕರಿಗೆ ಸನ್ಮಾನ, ಸ್ಮರಣ ಸಂಚಿಕೆ ಬಿಡುಗಡೆ ನಡೆಯಲಿದೆ ಎಂದು ವಿವರಿಸಿದರು.‌ ಮಧ್ಯಾಹ್ನ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕುಶಾಲಪ್ಪ ಮಾಸ್ತರ್ ರುದ್ರಚಾಂಡಿ, ಕೋಶಾಧಿಕಾರಿ ಶ್ರೀಮತಿ ವಾಣಿ ಕೆ.ಎಸ್., ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಕೆ., ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಗೌಡ ಚಿತ್ತಡ್ಕ, ಸಂಚಾಲಕ ವಿಜೇಶ್ ಹಿರಿಯಡ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ರಾಜ್ ಹಿರಿಯಡ್ಕ, ಪ್ರ.ಕಾರ್ಯದರ್ಶಿ ಪ್ರೀತಮ್ ಮುಂಡೋಡಿ ಉಪಸ್ಥಿತರಿದ್ದರು.