ಜೇಸಿಐ ಸುಳ್ಯ ಸಿಟಿ – ಪದ ಪ್ರದಾನ ಸಮಾರಂಭ

0

ಅದ್ಯಕ್ಷ- ಜೇಸಿ ವಿಷ್ಣುಪ್ರಕಾಶ್ ನಾರ್ಕೋಡು, ಕಾರ್ಯದರ್ಶಿ- ಜೇಸಿ ಪ್ರಮೀಳಮನಮೋಹನ ಬಳ್ಳಡ್ಕ

ಜೇಸಿಐ ಸುಳ್ಯ ಸಿಟಿ ಘಟಕದ ನೂತನ ಆಡಳಿತ ಮಂಡಳಿಯ ಪದ ಪ್ರಧಾನ ಸಮಾರಂಭವು
ದಿ ಗ್ರಾಂಡ್ ಪರಿವಾರ್ ಸಭಾಭವನದಲ್ಲಿ ಫೆ. 01 ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಹಿರಿಯ ಸಹಕಾರಿ ಧುರೀಣ ಜಾಕೆ ಮಾದವ ಗೌಡ, ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಹಾಗೂ ಪದ ಪ್ರಧಾನ ಅಧಿಕಾರಿಯಾಗಿ ವಲಯ ಉಪಾಧ್ಯಕ್ಷ ಜೇಸಿ ಅಭಿಷೇಕ್ ಉಪಸ್ಥಿತರಿದ್ದರು.


2024 ನೇ ಸಾಲಿನ ಅದ್ಯಕ್ಷ ಜೇಸಿ ವಿಷ್ಣುಪ್ರಕಾಶ್ ನಾರ್ಕೋಡು, ಕಾರ್ಯದರ್ಶಿ ಜೇಸಿ ಪ್ರಮೀಳಾಮನಮೋಹನ ಬಳ್ಳಡ್ಕ, ಉಪಾಧ್ಯಕ್ಷರುಗಳಾಗಿ ಅಶ್ವತ್ ಅಡ್ಕಾರ್, ರಿಯಾಜ್ ಸುಳ್ಯ, ಶಶಿಧರ ಎಕ್ಕಡ್ಕ, ನಾಗವೇಣಿ ದಾಮೊದರ,
ಮೋಹಿತ್ ಹರ್ಲಡ್ಕ, ಖಜಾಂಜಿ ಗೋಪಾಲಕೃಷ್ಣ ಪೆರ್ಲಂಪಾಡಿ, ಘಟಕದ ನಿರ್ದೇಶಕರಾಗಿ ರಕ್ಷಿತ್, ಪ್ರಜ್ವಲ್, ರಶ್ಮಿ, ತೇಜಸ್ವಿನಿಪ್ರಕಾಶ್ ನಾರ್ಕೋಡು, ಚೇತನ್ ಅಮೆಮನೆ, ಜೆಜೇಸಿ ಯುವ ವಿಭಾಗದ ಅದ್ಯಕ್ಷ ಚರಿತ್,ಕಾರ್ಯದರ್ಶಿ ಕೀರ್ತಿ ಯವರನ್ನು ಆಯ್ಕೆ ಮಾಡಲಾಯಿತು.

ನಿಕಟ ಪೂರ್ವ ಅಧ್ಯಕ್ಷ ಜೇಸಿ ರಂಜಿತ್ ಪದವು ಅಧಿಕಾರ ಹಸ್ತಾಂತರಿಸಿದರು.