ಫೆ.9 -11ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ-ಗೂನಡ್ಕ ಉರೂಸ್

0

ಜಾತಿಮತ ಭೇದವಿಲ್ಲದೆ ಸರ್ವರಿಂದಲೂ ಗೌರವಿಸಲ್ಪಡುವ ಆಶಾಕೇಂದ್ರವಾದ ಪೇರಡ್ಕ ದರ್ಗಾ ಶರೀಫ್ ಉರೂಸ್ ಸಮಾರಂಭ ಮತ್ತು ಮೂರು ದಿನಗಳ ಧಾರ್ಮಿಕ ಉಪನ್ಯಾಸ ಫೆ.9 ರಿಂದ 11ರವರೆಗೆ ನಡೆಯಲಿದೆ .ಫೆ.9ರಂದು ಎಂ.ಜಿ.ಎಂ. ಪೇರಡ್ಕ ಇದರ ಅಧ್ಯಕ್ಷ ರಾದ ಟಿ.ಎಂ.ಶಹೀದ್ ತೆಕ್ಕಿಲ್
ಧ್ವಜಾರೋಹಣ ನೆರವೇರಿಸಲಿದ್ದಾರೆ. ರಾತ್ರಿ
ಕಾರ್ಯಕ್ರಮದ ಉದ್ಘಾಟನೆ ಮತ್ತು
ಖುತುಮುಲ್ ಖು‌ರ್ ಆನ್ ದು:ಆ ನೇತೃತ್ವ ವನ್ನು ಬಹು। ಸಯ್ಯದ್ ಝನುಲ್ ಆಬಿದೀನ್ ಜಿಪಿ ತಂಙಳ್ ಬೆಳ್ತಂಗಡಿ ನೆರವೇರಿಸಲಿದ್ದಾರೆ.
ಧಾರ್ಮಿಕ ಪ್ರಭಾಷಣವನ್ನು
ಆಲ್‌ಹಾಜ್ ಸಿರಾಜುದ್ದೀನ್ ದಾರಿಮಿ ಕಕ್ಕಾಡ್ ಕೇರಳ ಮಾಡಲಿದ್ದಾರೆ. ಫೆ.10 ರಂದು
ಹಾಜಿ ಇಬ್ರಾಹಿಂ ಮೈಲುಕಲ್ಲು, ಮಾಜಿ ಅಧ್ಯಕ್ಷರು ಎಂ.ಜೆ.ಎಂ.ಪೇರಡ್ಕ ಇವರ ಅಧ್ಯಕ್ಷ ತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಉದ್ಘಾಟನೆಯನ್ನು
ಬಹು | ಆಲ್‌ಹಾಜ್ ಇಸಾಖ್ ಬಾಖವಿ, ಖತೀಬರು, ಬಿ.ಜೆ.ಎಂ. ಅರಂತೋಡು ನೆರವೇರಿಸಲಿದ್ದಾರೆ.
ಮುಖ್ಯ ಪ್ರಭಾಷಣವನ್ನು
ಬಹು। ಮಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಮಾಡಲಿದ್ದಾರೆ.
ಫೆ. 11 ರಂದು ರಾತ್ರಿ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಮುಖ್ಯ ಪ್ರಭಾಷಣವನ್ನು ಬಹು। ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾಡಲಿದ್ದು,
ದು:ಆ ನೇತೃತ್ವವನ್ನು ಬಹು। ಸಯ್ಯದ್ ಝನುಲ್ ಆಬಿದೀನ್ ತಂಬಳ್ ದುಗ್ಗಲಡ್ಕ ನೆರವೇರಿಸಲಿದ್ದಾರೆ.
ಧಾರ್ಮಿಕ ಪ್ರಭಾಷಣವನ್ನು ಬಹು। ರಿಯಾಝ್ ಪೈಝಿ ಎಮ್ಮೆಮಾಡು ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ನಡೆಯಲಿದೆ. ಸರ್ವಧರ್ಮದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಫೆ.12-00 ಗಂಟೆಗೆ ಪಳ್ಳಿನೇರ್ಚೆ ನಡೆಯಲಿದೆ. ಪ್ರತೀ ರಾತ್ರಿ ದಿನ 7-30ಕ್ಕೆ ಸರಿಯಾಗಿ . ಮಹಮ್ಮದ್ ಹಾಜಿ ಮೆಮೋರಿಯಲ್‌ ತಖ್‌ವೀಯ್ಯತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಲಿದೆ.