ಪಂಜ ಮೂಲಕ ಸಂಚರಿಸಿ ಪುಳಿಕುಕ್ಕು ಕಾಡಿನಲ್ಲಿ ಉಳಿದ ಕಾಡಾನೆ

0

ಪಂಬೆತ್ತಾಡಿ ಕಡೆಯಿಂದ ಫೆ.4 ರಂದು ಮಧ್ಯೆ ರಾತ್ರಿ ಸಂಚಾರಿಸಿದ ಕಾಡಾನೆ ಪುಳಿಕುಕ್ಕು ಅರಣ್ಯದಲ್ಲಿ ಉಳಿದಿರುವುದಾಗಿ ತಿಳಿದು ಬಂದಿದೆ.

ಅನೇಕ ವರ್ಷಗಳಿಂದ ಸುಳ್ಯ ತಾಲೂಕಿನಾದ್ಯಂತ ಸಂಚರಿಸಿ ಸುದ್ದಿಯಾಗುತ್ತಿರುವ ಸಂಚಾರಿ ಒಂಟಿ ಸಲಗ (ಕಾಡಾನೆ) ಬಂಟಮಲೆ ಅರಣ್ಯ ಪ್ರದೇಶದಿಂದ ನಿನ್ನೆ ರಾತ್ರಿ ಪಂಬೆತ್ತಾಡಿ ಮೂಲಕ ಕರಿಕ್ಕಳದಲ್ಲಿ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯನ್ನು ದಾಟಿದೆ. ಬಳಿಕ ಪಂಜದ ಗಾಳಿಬೀಡು ಮೂಲಕ ಚಿಂಗಾಣಿಗುಡ್ಡೆ, ಬೊಳ್ಳಾಜೆ , ನೆಕ್ಕಿಲ ಸಮೀಪದಲ್ಲಿ ಕೃಷಿ ತೋಟಗಳ ಮೂಲಕ ಸಂಚರಿಸಿ . ಪುಳಿಕುಕ್ಕು ಅರಣ್ಯದಲ್ಲಿ ಉಳಿದಿದೆ. ಈ ಪ್ರದೇಶದಲ್ಲಿ ಸಂಚರಿಸುವವರು ಜಾಗೃತಿ ವಹಿಸ ಬೇಕಾಗಿದೆ.