ಅಂಗಡಿಮಜಲು : ಶಾಂತಪ್ಪ ರೈ ಯವರು ನೂತನವಾಗಿ ನಿರ್ಮಿಸಿದ ಗೃಹಪ್ರವೇಶ – ಸನ್ಮಾನ – ಯಕ್ಷಗಾನ ತಾಳಮದ್ದಳೆ

0

ಮರ್ಕಂಜ ಗ್ರಾಮದ ಅಂಗಡಿಮಜಲು ಶ್ರೀದೇವಿ ಶಾಮಿಯಾನ ಇದರ ಮಾಲಕ ಶಾಂತಪ್ಪ ರೈ ಎಂಬವರು ನೂತನವಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶ ಕಾರ್ಯಕ್ರಮವು ಫೆ.1ರಂದು ಶ್ರೀ ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ದೇವರ ಪೂಜೆಯೊ‌ಂದಿಗೆ ನಡೆಯಿತು.

ಇದೇ ಸಂದರ್ಭದಲ್ಲಿ ಹಿರಿಯರಾದ ಯುವರಾಜ ಜೈನ್ ಬಲ್ನಾಡುಪೇಟೆ, ಕಳೆದ ಹಲವಾರು ವರ್ಷಗಳಿಂದ ಮಿತ್ತೂರು ಉಳ್ಳಾಕುಲು ದೈವದ ದೊಡ್ಡ ಪೂಜಾರಿಗಳಾಗಿದ್ದ ರವಿವರ್ಮ ರೈ, ಶಾಂತಪ್ಪ ರೈ ಯವರ ಅತ್ತೆ ಶ್ರೀಮತಿ‌ ಕಲ್ಯಾಣಿ ಮಾವ ಸಂಜೀವ ರೈಯವರನ್ನು ಸನ್ಮಾನಿಸಲಾಯಿತು. ಮಧ್ಯಾಹ್ನದ ಬಳಿಕ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಾಗೂ ಫೆ.3ರಂದು ಕಲ್ಕುಡ-ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಿತು.