ಮೂಡಬಿದಿರೆಯಲ್ಲಿ ರಾಜ್ಯ ಮಟ್ಟದ ಯಕ್ಷ ಧ್ರುವ ವಿದ್ಯಾರ್ಥಿ ಸಮ್ಮಿಲನ

0

ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ

ಯಕ್ಷ ಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ ಇದರ ಸಹಯೋಗದೊಂದಿಗೆ ಫೆ. 6 ರಂದು ಆಳ್ವಾಸ್‌ನಲ್ಲಿ ನಡೆದ ರಾಜ್ಯ ಮಟ್ಟದ ಯಕ್ಷ ಧ್ರುವ ವಿದ್ಯಾರ್ಥಿ ಸಮ್ಮಿಲನದಲ್ಲಿ ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ತಂಡವು ಪ್ರದರ್ಶಿಸಿದ ವಿಶ್ವ ರೂಪ ಯಕ್ಷಗಾನ ಪ್ರದರ್ಶನ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. 52 ವಿದ್ಯಾರ್ಥಿಗಳು ತಂಡದಲ್ಲಿದ್ದರು. ಯಕ್ಷಗಾನ ಶಿಕ್ಷಕ ಗಿರೀಶ್ ಗಡಿಕಲ್ಲುರವರು ಇದನ್ನು ನಿರ್ದೇಶಿಸಿದ್ದರು. ಸುಮಾರು 48 ಕ್ಕಿಂತಲೂ ಹೆಚ್ಚು ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.