ಕೊಡಗು ಸಂಪಾಜೆ : ಮನೆಗೆ ನುಗ್ಗಿ ಹಣ ಸಹಿತ ಚಿನ್ನಾಭರಣ ಕಳ್ಳತನ

0

ಸ್ಥಳಕ್ಕೆ ಬೆರಳಚ್ಚು ತಜ್ಞರ ಆಗಮನ – ಶ್ವಾನದಳದಿಂದ ಪರಿಶೀಲನೆ

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಸಹಿತ ಹಣ ಕಳ್ಳತನ ನಡೆಸಿದ ಘಟನೆ ಕೊಡಗು ಸಂಪಾಜೆಯ ಬೈಲಿನಲ್ಲಿ ಫೆ.08 ರಂದು ನಡೆದಿದೆ.

ಸಂಪಾಜೆ ಬೈಲಿನ ಕನ್ಯಾನ ವಿಜಯ ಕುಮಾರ್ ಅವರ ಮನೆಗೆ ಕಳ್ಳರು ನುಗ್ಗಿ ಕಳ್ಳತನ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಬೆಳಿಗ್ಗೆ ಕಲ್ಲುಗುಂಡಿಯ ತಮ್ಮ ಅಂಗಡಿಗೆ ಹೋಗಿ ಸಂಜೆ ವೇಳೆ ಮನೆಗೆ ಹಿಂದಿರುಗಿ ನೋಡಿದಾಗ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿತ್ತು. ಕೂಡಲೇ ಸ್ಥಳೀಯರಿಗೆ ವಿಷಯ ತಿಳಿಸಲಾಗಿದ್ದು, ಸಂಪಾಜೆ ಪೊಲೀಸರಿಗೆ ಮಾಹಿತಿ ತಿಳಿಸಲಾಗಿದೆ. 40 ಗ್ರಾಂ ಚಿನ್ನಾಭರಣ ಮತ್ತು 20ಸಾವಿರ ಮೌಲ್ಯದ ಹಣ , ಉಂಗುರ ಕಳ್ಳತನವಾಗಿದೆ. ಸ್ಥಳಕ್ಕೆ ಮಡಿಕೇರಿ ಪೊಲೀಸ್ ಇನ್ಸ್ ಪೆಕ್ಟರ್ ಉಮೇಶ್ ಉಪ್ಪಳಿಕೆ, ಕ್ರೈಂ ಶ್ರೀನಿವಾಸಲು, ಸಿಬ್ಬಂದಿ ರಮೇಶ್, ಬಸವರಾಜ್, ಮಧು, ನಾಗರಾಜ್
ಬೆರಳಚ್ಚು ತಜ್ಞರು , ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಲಾಗಿದೆ.