ಎಂಡಿಎಸ್ ನಲ್ಲಿ ಡಾ.ಸಂದೀಪ್ ಬಿರ್ಮುಕಜೆಯವರು ಚಿನ್ನದ ಪದಕದೊಂದಿಗೆ ಉತ್ತೀರ್ಣ

0

ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು 2023ರಲ್ಲಿ ನಡೆಸಿದ ಎಂ.ಡಿ.ಎಸ್ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ (Oral and Maxillofacial Surgery)ನಲ್ಲಿ ಡಾ.ಸಂದೀಪ್ ಬಿರ್ಮುಕಜೆಯವರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮೊದಲ ಸ್ಥಾನಿಯಾಗಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ದಾವಣಗೆರೆಯ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ.ಎಸ್ ಪದವಿ ಪೂರೈಸಿದ್ದ ಇವರು, ಐವರ್ನಾಡು ಗ್ರಾಮದ ಬಿರ್ಮುಕಜೆ ಸುಧಾಕರ ಗೌಡ ಮತ್ತು ಉದಯಗೌರಿ ದಂಪತಿಗಳ ಪುತ್ರ. ಸುಳ್ಯ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಬಿಡಿಎಸ್ ಪದವಿ ಪಡೆದಿದ್ದರು.

ಪ್ರಸ್ತುತ ಇವರು ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಹಿರಿಯ ಉಪನ್ಯಾಸಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದು, ಜಾಲ್ಸುರಿನ ಎನ್.ಇ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಸ್ಮೈಲ್ ವಿಜ಼್ ಎಂಬ ದಂತ ಚಿಕಿತ್ಸಾಲಯವನ್ನು ನಡೆಸುತ್ತಿದ್ದಾರೆ.