ಪಂಜದ ರವಿ ಚಲ್ಲಕೋಡಿ ರವರು ಕ್ರೀಡಾ ಕೂಟದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0

ವೆಟರನ್ಸ್ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡಿನ ತಿರುನಲ್ವೇಲಿಯ ಅಣ್ಣಾ ಸ್ಟೇಡಿಯಂನಲ್ಲಿ ಫೆ. 2 ರಿಂದ 4ರವರೆಗೆ ನಡೆದ 43ನೇ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಐವತ್ತೊಕ್ಲು ಗ್ರಾಮದ ಕೃಷಿಕ, ಜಾದೂ ಹಾಗೂ ಜನಪದ ಕಲಾವಿದ ರವಿ ಚಲ್ಲಕೋಡಿ ರವರು ಶಾಟ್ ಪುಟ್ ಹಾಗೂ ಚಕ್ರ ಎಸೆತದಲ್ಲಿ ತೃತೀಯ, 4×100 ರಿಲೇಯಲ್ಲಿ ದ್ವಿತೀಯ ಸ್ಥಾನ ಗಳಿಸಿ, ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಅವರು ಚಲ್ಲಕೋಡಿ ದಿ.ಕುಶಾಲಪ್ಪ ಗೌಡ ಮತ್ತು ಶ್ರೀಮತಿ ಮೀನಾಕ್ಷಿ ದಂಪತಿಗಳ ಪುತ್ರ.

ಪಾಂಡಿಗದ್ದೆ ಕಿರಿಯ ಪ್ರಾಥಮಿಕ ಶಾಲೆ ಮತ್ತು ಪಂಜದ ಸರಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಸುತ್ತಮುತ್ತಲಿನ ಪರಿಸರದ ಮಕ್ಕಳಿಗೆ ಜನಪದ ಕಲೆ ಮತ್ತು ಕ್ರೀಡಾ ತರಬೇತಿ ನೀಡುತ್ತಿದ್ದಾರೆ. ಪಾಂಡಿಗದ್ದೆ ಕಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುತ್ತಾರೆ.