ಪಂಜ: ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಕಾರು

0

ಕಾರು ನಿಲ್ಲಿಸದೆ ಪರಾರಿ

ದ್ವಿಚಕ್ರ ಚಾಲಕನಿಗೆ ಗಾಯ

ಪಂಜದ ಸಮೀಪ ಸುಬ್ರಹ್ಮಣ್ಯ ಕಡೆಗೆ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ ಮತ್ತು ಬೈಕ್ ಸವಾರ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಪಂಜದಲ್ಲಿ ಇಲೆಕ್ಟ್ರಿಕಲ್ ಕಾರ್ಯ ನಿರ್ವಹಿಸುತ್ತಿರುವ ಸತೀಶ್ ಎಂಬವರು ತಮ್ಮ ದ್ವಿಚಕ್ರ ವಾಹನದಲ್ಲಿ ನಿಂತಿಕಲ್ಲಿನಿಂದ ಪಂಜ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕರಿಕ್ಕಳ ಕೃಷ್ಣನಗರದ ಮಧ್ಯೆ ತಿರುವಿನಲ್ಲಿ ಹಿಂದಿನಿಂದ ಬಂದ ಕಾರೊಂದು ಬೈಕಿಗೆ ಗುದ್ದಿ ಬೈಕ್ ರಸ್ತೆಗೆ ಬಿದ್ದು ಸವಾರ ಸತೀಶರಿಗೆ ಸಣ್ಣ ಪುಟ್ಟ ಗಾಯವಾಯಿತು. ಆದರೆ ಗುದ್ದಿದ ಕಾರು ಚಾಲಕ ಕಾರನ್ನು ನಿಲ್ಲಿಸದೆ, ಗಾಯಾಳುವನ್ನು ವಿಚಾರಿಸದೆ ಎಸ್ಕೇಪ್ ಆಗಿರುವುದಾಗಿ ಆರೋಪಿಸಿ ಬೈಕ್ ಸವಾರ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿರುವುದಾಗಿ ತಿಳಿದುಬಂದಿದೆ. ಕಾರಿನ ರಿಜಿಸ್ಟ್ರೇಷನ್ ನಂಬರ್ ಮೂಲಕ ಕಾರು ಪುತ್ತೂರು ಕಡೆಯದ್ದೆಂದು ತಿಳಿದುಬಂದಿರುವುದಾಗಿ ಸತೀಶ್ ತಿಳಿಸಿರುತ್ತಾರೆ.