ಪೆರುವಾಜೆ ಬ್ರಹ್ಮರಥ ನಿರ್ಮಾಣಕ್ಕೆ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ 3 ಲಕ್ಷ ರೂ .ಚೆಕ್ ಹಸ್ತಾಂತರ

0

ಜಲದುರ್ಗಾದೇವಿ ದೇವಸ್ಥಾನ ಪೆರುವಾಜೆ ಬ್ರಹ್ಮರಥ ನಿರ್ಮಾಣದ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ.300000 ಮೊತ್ತದ ಡಿ .ಡಿಯನ್ನು ದೇವಸ್ಥಾನದ ಆಡಳಿತ ಸಮಿತಿ ಮಾಜಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿಯವರಿಗೆ ತಾಲೂಕು ಯೋಜನಾಧಿಕಾರಿ ನಾಗೇಶ್ ಪಿ ಹಸ್ತಾಂತರಿಸಿದರು.


ಈ ಸಂದರ್ಭ ವಲಯದ ಮೇಲ್ವಿಚಾರಕರಾದ ಗೋಪಾಲಕೃಷ್ಣ, ಸಮಿತಿಯ ನಿಕಟಪೂರ್ವ ಸದಸ್ಯರಾದ ವೆಂಕಟ ಕೃಷ್ಣ ರಾವ್ ಪೆರುವಾಜೆ ,ನಾರಾಯಣ ಕೊಂಡೆಪ್ಪಾಡಿ,ವಲಯದ ಅಧ್ಯಕ್ಷರಾದ ಶ್ರೀಮತಿ ವೇದಾ ಶೆಟ್ಟಿ, ಪೆರುವಾಜೆ ಗ್ರಾಮದ ಸೇವಾಪ್ರತಿನಿಧಿ ಶ್ರೀಮತಿ ಹರಿಣಾಕ್ಷಿ , ನೆಟ್ಟಾರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯಾದ ಗೀತಾ ದೇವರಕಾನ ,ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯಾದ ಶ್ರೀಮತಿ ಯಶೋಧ.ಪೆರುವಾಜೆ ,ಒಕ್ಕೂಟದ ಅಧ್ಯಕ್ಷರಾದ ಸುಂದರ ನಾಯ್ಕ , ಬೆಳ್ಳಾರೆ ಒಕ್ಕೂಟದ ಅಧ್ಯಕ್ಷರಾದ ಹರಿಣಾಕ್ಷಿ ನೆಟ್ಟಾರು, ಒಕ್ಕೂಟದ ಅದ್ಯಕ್ಷ ಅಣ್ಣು, ದೇವಸ್ಥಾನದ ಕಚೇರಿಯ ನಿರ್ವಾಹಕರಾದ ವಸಂತ ಆಚಾರ್ಯ ಉಪಸ್ಥಿತರಿದ್ದರು.