ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಸಂಪನ್ನ

0

ಭಕ್ತಿ,ಸಂಭ್ರಮದಿಂದ ನಡೆದ ದೈವಗಳ ನೇಮೋತ್ಸವ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವವು ಫೆ.10 ರಂದು ಸಂಪನ್ನಗೊಂಡಿತು.
ಫೆ.08 ರಿಂದ ವಿವಿಧ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪ್ರತಿಷ್ಠಾ ವಾರ್ಷಿಕೋತ್ಸವವು ಫೆ.10 ರವರೆಗೆ ವಿಜೃಂಭಣೆಯಿಂದ ನಡೆಯಿತು.
ಫೆ.10 ರಂದು ಬೆಳಿಗ್ಗೆ ಕೊಯಿಲ ಉಳ್ಳಾಕುಲು ದೈವಗಳ ಬಂಡಾರ ಆಗಮನವಾದ ಬಳಿಕ ಶ್ರೀ ದೇವರ ಬಲಿ ಹೊರಟು ಇತ್ಸವ,ದರ್ಶನ ಬಲಿ,ಬಟ್ಟಲು ಕಾಣಿಕೆ ನಡೆಯಿತು.
ಬಳಿಕ ಶುದ್ಧಿ ಕಲಶ,ಮಹಾಪೂಜೆ,ವೈದಿಕ ಮಂತ್ರಾಕ್ಷತೆ,ಪ್ರಸಾದ ವಿತರಣೆ ನಡೆದ ಬಳಿಕ ಸಾವಿರಾರು ಜನ ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸಿದರು.
ರಾತ್ರಿ ದೈವಗಳ ನಡಾವಳಿಯು ಭಕ್ತಿ,ಸಂಭ್ರಮದಿಂದ ನಡೆಯಿತು.


ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ
ಫೆ.10 ರಂದು ಬೆಳಿಗ್ಗೆ ಶ್ರೀಧರ ಖಂಡಿಗೆಮೂಲೆ ತಂಡದವರಿಂದ “ಭಕ್ತಿಗಾನ ಸುಧಾ” ನಡೆಯಿತು.
ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ಬೆಳ್ಳಾರೆ ಶಾಖೆಯ ವಿದ್ಯಾರ್ಥಿಗಳಿಂದ “ನೃತ್ಯಾರ್ಪಣಂ” ನಡೆಯಿತು.
ರಾತ್ರಿ ಯಕ್ಷಸಿರಿ ಕಲಾವೇದಿಕೆ ಖಂಡಿಗೆಮೂಲೆ ಇವರಿಂದ “ಸಾಯುಜ್ಯ ಸಂಗ್ರಾಮ “
ಯಕ್ಷಗಾನ ನಡೆಯಿತು.
ಸೇರಿದ ಪ್ರೇಕ್ಷಕರನ್ನು ಮನರಂಜಿಸಿತ್ತು.