ಏನೆಕಲ್ಲು ರೈತ ಯುವಕ ಮಂಡಲ ಕಟ್ಟಡ ಉದ್ಘಾಟನಾ ಆಮಂತ್ರಣ ಪತ್ರಿಕೆ ಬಿಡುಗಡೆ

0

ಏನೆಕಲ್ಲು ರೈತ ಯುವಕ ಮಂಡಲದ ನೂತನ ಕಟ್ಟಡ ಸುಮಾರು ಒಂದು ಕೋಟಿ 30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತಿದ್ದು ಇದರ ತಳ ಅಂತಸ್ತು ಸುಮಾರು 65 ಲಕ್ಷ ವೆಚ್ಚದಲ್ಲಿ ಆಗಿದ್ದು ಅದರ ಉದ್ಘಾಟನಾ ಸಮಾರಂಭವು ಫೆ. 24ರಂದು ನಡೆಯಲಿರುವುದು.ಅದರ ಆಮಂತ್ರಣ ಪತ್ರಿಕೆ ಫೆ.11 ರಂದು ಯುವಕ ಮಂಡಲದ ಕಟ್ಟಡದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು. ಕಟ್ಟಡ ರಚನಾ ಸಮಿತಿಯ ಹಿರಿಯ ಉಪಾಧ್ಯಕ್ಷ ಶಿವರಾಮ ಹಿರಿಯರಾದ ಕೃಷಿಕ ಕಾರ್ಯಪ್ಪ ಗೌಡ ಪುಂಡಿಗದ್ದೆ, ಹಾಗೂ ಹಿರಿಯ ನಿವೃತ್ತ ಶಿಕ್ಷಕ ನಾಗರಾಜ ಪರಮಲೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಯುವಕಮಂಡಲದ ಕಟ್ಟಡ ರಚನಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಯುವಕ ಮಂಡಲದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಊರ ಗಣ್ಯರು ಉಪಸ್ಥಿತರಿದ್ದರು.