ಆಲೆಟ್ಟಿ ಸದಾಶಿವ ದೇವರ ಕಾಲಾವಧಿ ಜಾತ್ರೋತ್ಸವ- ಇಂದು ಧ್ವಜಾರೋಹಣ, ಉಗ್ರಾಣ ಮುಹೂರ್ತ

0

ಆಲೆಟ್ಟಿ ಸದಾಶಿವ ದೇವರ ಕಾಲಾವಧಿ ಜಾತ್ರೋತ್ಸವದ ಉಗ್ರಾಣ ಮುಹೂರ್ತ ಕಾರ್ಯಕ್ರಮ ಇಂದು ಬೆಳಗ್ಗೆ ನಡೆಯಿತು.
ಬೆಳಗ್ಗೆ ದೇವರಿಗೆ ಪೂಜೆಯಾಗಿ ಹಸಿರುವಾಣಿ ಸಮರ್ಪಣೆ ಯೊಂದಿಗೆ ಉಗ್ರಾಣ ತುಂಬುವ ಕಾರ್ಯ ನೆರವೇರಿತು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6.30 ಕ್ಕೆ ತಂತ್ರಿಯವರ ನೇತೃತ್ವದಲ್ಲಿ ಜಾತ್ರೋತ್ಸವದ ಧ್ವಜಾರೋಹಣ ನಡೆಯಲಿರುವುದು.
ಫೆ.18 ರ ತನಕ ಉತ್ಸವವು ನಡೆಯಲಿದೆ.