ಐವರ್ನಾಡು: ಕೃಷಿಕ ನವೀನ್ ಚಾತುಬಾಯಿ ಅವರ ಕೃಷಿ ಕ್ಷೇತ್ರದಲ್ಲಿ ಪೊನ್ನಂಪೇಟೆಯ ರೈತರಿಗೆ ತರಬೇತಿ

0

ಐವರ್ನಾಡು ಗ್ರಾಮದ ಪ್ರಗತಿಪರ ರೈತರಾದ ಸಿ. ಕೆ. ನವೀನ್ ಚಾತುಬಾಯಿ ಅವರ ಕೃಷಿ ಕ್ಷೇತ್ರದಲ್ಲಿ ಕೊಡಗು ಜಿಲ್ಲೆಯ ಮೀನುಗಾರಿಕಾ ಇಲಾಖೆಯ ವತಿಯಿಂದ ಮಡಿಕೇರಿಯ ಪೊನ್ನಂಪೇಟೆಯ ರೈತರಿಗೆ ಸಿಹಿ ನೀರಿನ ಮತ್ತು ಕೃಷಿಯ ತರಬೇತಿ ಕಾರ್ಯಕ್ರಮವು ನಡೆಯಿತು.
ಪೊನ್ನಂಪೇಟೆಯ ಮೀನುಗಾರಿಕಾ ಸಹಾಯಕ ನಿರ್ದೇಶಕ ಸಚಿನ್ ರವರ ನೇತೃತ್ವದಲ್ಲಿ ಸುಮಾರು 25 ರೈತರಿಗೆ ಸಿಹಿ ನೀರಿನ ಮುತ್ತು ಕೃಷಿ, ಮೀನು ಸಾಕಾಣಿಕೆ, ಜೇನು ಸಾಕಾಣಿಕೆ ಹಾಗೂ ತೋಟಗಾರಿಕಾ ಬೆಳೆಗಳಾದ ಅಡಿಕೆ , ತೆಂಗು, ರಬ್ಬರ್ ಕೃಷಿಯ ಬಗ್ಗೆ ಮಾಹಿತಿ ನೀಡಲಾಯಿತು.

ತರಬೇತಿಗೆ ಬಂದ ರೈತರುಗಳು ನವೀನ್ ಚಾತುಬಾಯಿ ಅವರ ಸಮಗ್ರ ಕೃಷಿ ಪದ್ಧತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು