ರವಿಕೆ ಪ್ರಸಂಗ ರಾಜ್ಯಾದ್ಯಂತ ಇಂದು ಬಿಡುಗಡೆ

0

ಸುಳ್ಯದ ಪ್ರತಿಭಾನ್ವಿತ ಚಿತ್ರ ನಿರ್ದೇಶಕ ಸಂತೋಷ್ ಕೊಡೆಂಕಿರಿಯವರ ನಿರ್ದೇಶನದ ರವಿಕೆ ಪ್ರಸಂಗ ಚಲನಚಿತ್ರದ ಬಿಡುಗಡೆ ರಾಜ್ಯಾದ್ಯಂತ ಇಂದು ನಡೆಯುತ್ತಿದೆ.

ಸುಳ್ಯ, ಸಂಪಾಜೆ, ಅರಂತೋಡು, ತೊಡಿಕಾನ ಭಾಗಗಳಲ್ಲಿ ಹೆಚ್ಚು ಚಿತ್ರೀಕರಣಗೊಂಡಿರುವ ಈ ಸಿನಿಮಾದ ತಾಂತ್ರಿಕ ಕಾರ್ಯಗಳು ಬೆಂಗಳೂರಿನಲ್ಲಿ ನಡೆದಿದ್ದು, ಟೀಸರ್ ಬೀಡುಗಡೆ, ಟ್ರೈಲರ್ ಬಿಡುಗಡೆಯ ಬಳಿಕ ಇಂದು ಚಿತ್ರದ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ಆಯೋಜಿತವಾಗಿದೆ.

ಸುಳ್ಯದಲ್ಲಿ ಸಿನಿಮಾದ ಅಭಿಮಾನಿಗಳು ಮತ್ತು ಸಂತೋಷ್ ಕೊಡೆಂಕಿರಿಯವರ ಮಿತ್ರರು ಸೇರಿ ಸಂತೋಷ್ ಚಿತ್ರಮಂದಿರದಲ್ಲಿ ಬೆಳಿಗ್ಗೆ 1೦.3೦ಕ್ಕೆ ಕಿರು ಸಭಾ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. 11 ಗಂಟೆಗೆ ಚಿತ್ರ ಪ್ರದರ್ಶನ ಆರಂಭವಾಗಲಿದೆ.

ಚಿತ್ರದ ನಿರ್ದೇಶಕ ಸಂತೋಷ್ ಕೊಡೆಂಕಿರಿ, ನಾಯಕ ನಟಿ ಗೀತಾ ಭಾರತಿ ಭಟ್ ಮತ್ತು ತಾರಾಗಣದ ಇತರ ಸದಸ್ಯರು ಚಿತ್ರಕಥೆ, ಸಂಭಾಷಣೆ ಬರೆದ ಶ್ರೀಮತಿ ಪಾವನ ಸಂತೋಷ್ ಅವರೆಲ್ಲಾ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುವ ವೇಳೆ ಅಲ್ಲಿರಲಿದ್ದು, ಒಂದೆರಡು ದಿನದಲ್ಲಿ ಸುಳ್ಯ ಸಂತೋಷ್ ಚಿತ್ರ ಮಂದಿರಕ್ಕೆ ಕೂಡಾ ಭೇಟಿ ಕೊಡಿಲಿದ್ದಾರೆ.ಅತ್ಯಂತ ವಿನೂತನವಾದ ಮತ್ತು ಬಹುತೇಕ ಮಹಿಳೆಯರಿಗೆ ಮತ್ತು ಪುರುಷರಿಗೆ ಸಂಬಂಧಪಟ್ಟ ಕಥಾವಸ್ತುವುಳ್ಳ ಈ ರವಿಕೆ ಪ್ರಸಂಗ ನವಿರಾದ ನಿರೂಪಣೆಯೊಂದಿಗೆ ಪ್ರೇಕ್ಷಕರ ಮನ ಸೆಳೆಯಲಿದೆ.