ಅರಂಬೂರು ಮೂಕಾಂಬಿಕಾ ಭಜನಾ ಮಂದಿರದಲ್ಲಿ 50 ನೇ ವರ್ಷದ ಏಕಾಹ ಭಜನೆ

0

ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ 50 ನೇ ವರ್ಷದ ಏಕಾಹ ಭಜನೆಯು ಫೆ.15 ರಂದು ಜರುಗಿತು.
ಪ್ರಾತ:ಕಾಲ ಸೂರ್ಯೋದಯದಲ್ಲಿ ಅರ್ಚಕರ ನೇತೃತ್ವದಲ್ಲಿ ದೀಪ ಸ್ಥಾಪನೆಯಾಗಿ ಭಜನಾ ಸಂಕೀರ್ತನೆಯು ಪ್ರಾರಂಭಗೊಂಡಿತು. ತಾಲೂಕಿನ ವಿವಿಧ ಸಂತ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆಯು ನೆರವೇರಿತು. ರಾತ್ರಿ ವಿವಿಧ ಕಡೆಗಳಿಂದ ಉಲುಪೆಯ ಮೆರವಣಿಗೆ ಕುಣಿತ ಭಜನೆ ಹಾಗೂ ಚೆಂಡೆ ವಾದನದೊಂದಿಗೆ ಮಂದಿರಕ್ಕೆ ಸಾಗಿ ಬಂತು. ರಾತ್ರಿ ಮಹಾಪೂಜೆಯಾಗಿ ಪ್ರಸಾದವಿತರಣೆಯಾಯಿತು. ಮರುದಿನ ಸೂರ್ಯೋದಯದ ಸಮಯದಲ್ಲಿ ದೀಪ ವಿಸರ್ಜನೆಯಾಗಿ ಮಂಗಳಾಚರಣೆಯೊಂದಿಗೆ ಭಜನಾ ಕಾರ್ಯಕ್ರಮ ಸಂಪನ್ನಗೊಂಡಿತು. ಮಂದಿರದ ಗೌರವಾಧ್ಯಕ್ಷ ರು,ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
ಮತ್ತು ‌ಸದಸ್ಯರು ಉಪಸ್ಥಿತರಿದ್ದರು.