ಕಲ್ಲುಗುಂಡಿ : ಫೆ.28ರಂದು ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

0

ಕಲ್ಲುಗುಂಡಿ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಸೇವಾ ಸಂಘ (ರಿ) ವತಿಯಿಂದ 34 ನೇ ವರ್ಷದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಕಲ್ಲುಗುಂಡಿ ಒತ್ತೆಕೋಲ ಗದ್ದೆಯಲ್ಲಿ ವಿದ್ಯುದ್ದೀಪಾಲಂಕಾರ ಭವ್ಯ ಮಂಟಪದಲ್ಲಿ ಫೆ. 28 ರಂದು ನಡೆಯಲಿದೆ. ಬಳಿಕ ಶ್ರೀ ದೇವಿಗೆ ವಿಶೇಷ ಪೂಜೆ ನಡೆಯಲಿದೆ. ಕಾರ್ಯಕ್ರಮಕ್ಕೆ ಊರು -ಪರವೂರಿನವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ತಿಳಿಸಿದ್ದಾರೆ