ಸುಳ್ಯ ಜೂನಿಯರ್ ಕಾಲೇಜು ರಸ್ತೆಯಲ್ಲಿ ಎರಡು ಬೈಕುಗಳು ಅಪಘಾತ

0

ಸುಳ್ಯ ಜೂನಿಯರ್ ಕಾಲೇಜು ಯುವಜನ ಸಂಯುಕ್ತ ಮಂಡಳಿ ಸಮೀಪ ಎರಡು ದ್ವಿಚಕ್ರ ವಾಹನ ಪರಸ್ಪರ ಮುಖ ಮುಖಿ ಡಿಕ್ಕಿಯಾಗಿ ಸವಾರರು ಗಾಯಗೊಂಡ ಘಟನೆ ಇದೀಗ ಸಂಭವಿಸಿದೆ.

ಘಟನೆಯಿಂದ ಅಪಾಚಿ ಬೈಕ್ ಮತ್ತು ಟಿವಿಎಸ್ ರೇಡಿಯಮ್ ಬೈಕುಗಳು ಜಖಂ ಗೊಂಡಿದ್ದು ಅಪಾಚಿ ವಾಹನದ ಸವಾರ ಪುತ್ತೂರು ನಿವಾಸಿ ಮತ್ತು ಟಿವಿಎಸ್ ಬೈಕ್ ಸವಾರ ಮೂಲತಃ ಸುಬ್ರಮಣ್ಯದವರೆಂದು ತಿಳಿದು ಬಂದಿದೆ. ಘಟನೆಯಿಂದ ಸವಾರರಿಗೆ ಸಣ್ಣಪುಟ್ಟ ಗಾಯವಾಗಿದ್ದು ಗಾಯಳುಗಳು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.