ಫೆ.24 ರಂದು ಸಜ್ಜನ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನಲ್ಲಿ ತರಬೇತಿ ಕಾರ್ಯಾಗಾರ

0

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಬೆಂಗಳೂರಿನ ವೇಟ್ ಫೀಲ್ಡ್ ಕೈಗಾರಿಕಾ ವಲಯ ಮಹದೇವಪುರ ವ್ಯಾಪ್ತಿಯಲ್ಲಿರುವ ವಾಸಿಯ (WACIA)ದಲ್ಲಿ ಫೆಬ್ರವರಿ 24 ಶನಿವಾರದಂದು ಆಂತರಿಕ ವಿಚಾರಣೆ ಮತ್ತು ಶಿಸ್ತು ಕ್ರಮ ಎಂಬ ವಿಷಯದ ಬಗ್ಗೆ ತರಬೇತಿ ಮಾಹಿತಿ ಕಾರ್ಯಾಗಾರ ನಡೆಯಲಿದೆ.

ಎ ಎ ಪಾರ್ಟ್ನರ್ ನ ಖ್ಯಾತ ಹಿರಿಯ ವಕೀಲರು, ಸಜ್ಜನ ಕನ್ನಡ ನಾಡು-ನುಡಿ ವಿಭಾಗದ ರಾಜ್ಯ ಸಂಚಾಲಕರು ಹಾಗೂ ಖ್ಯಾತ ತರಬೇತುದಾರರಾದ *ಶ್ರೀ ಮಂಜುನಾಥ ಬಿ, ಐಮ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಹೆಡ್ – ಹೆಚ್ ಆರ್ & ಐ ಆರ್ ವಿನಯ್ ಎಂ ಎಸ್ ರವರು ತರಬೇತಿ ನೀಡಲಿದ್ದಾರೆ.


ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಉಮ್ಮರ್ ಬೀಜದಕಟ್ಟೆಯವರು ವಹಿಸಲಿದ್ದಾರೆ.


ತರಭೇತಿ ಕಾರ್ಯಗಾರ ಉದ್ಘಾಟನೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಹಿರಿಯ ಅಧಿಕಾರಿಶ ಮೋಹನ್ ಕೋಲಾರ ರವರು ನೆರವೇರಿಸಲಿದ್ದಾರೆ.

ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಸಸ್ಮೋಸ್ ಗ್ರೂಪ್ ಆಫ್ ಕಂಪನೀಸ್, ಬೆಂಗಳೂರು ಇದರ ಮಾನವ ಸಂಪನ್ಮೂಲ ನಿರ್ದೇಶಕರಾದ ರಾಜಶೇಖರ ರೈ, ಲಗುನ ಕ್ಲೋತಿಂಗ್,ಬೆಂಗಳೂರು ಇದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಸದಾಶಿವ, ಎನ್ನೋವಿ ಮೊಬಿಲಿಟಿ ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್, ಲಿಮಿಟೆಡ್ ಬೆಂಗಳೂರು ಇದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ವಾಸು ಎಂ, ವ್ಯಪಿ ಲೆಕ್ಸ್ ಟೆಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇದರ ಚೀಫ್ -ಪೀಪಲ್& ಕಲ್ಚರ್ ಶ್ರೀಮತಿ ಕಲಾ ಬೋಸ್ ರವರುಭಾಗವಹಿಸಲಿದ್ದಾರೆ.


ಈ ಕಾರ್ಯಾಗಾರದಲ್ಲಿ ವಿವಿಧ ಸಂಸ್ಥೆಗಳಿಂದ 50ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಲಿದ್ದು, ಈ ಕಾರ್ಯಾಗಾರದಲ್ಲಿ ಆಸಕ್ತಿಯಿರುವವರು ಕೂಡಲೇ ತಮ್ಮ ಹೆಸರನ್ನು ಶ್ರೀ ಶಶಿಕಾಂತ್ ಇವರನ್ನು ದೂರವಾಣಿ ಸಂಖ್ಯೆ 9591997651 ಮೂಲಕ ಸಂಪರ್ಕಿಸಿ, ನೋಂದಾಯಿಸಬೇಕಾಗಿ ಕೋರಲಾಗಿದೆ.