ಶ್ರೀಮತಿ ಜಯಂತಿ ಪರಮಲೆ ನಿಧನ

0

ನಾಲ್ಕೂರು ಗ್ರಾಮದ ಸಾಲ್ತಾಡಿ ನಿವಾಸಿ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೂವಯ್ಯ ಗೌಡ ಪರಮಲೆಯವರ ಧರ್ಮಪತ್ನಿ ಶ್ರೀಮತಿ ಜಯಂತಿ ಪರಮಲೆಯವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಫೆ.18ರಂದು ನಿಧನರಾದರು.

ಅವರಿಗೆ 52 ವರ್ಷ ವಯಸ್ಸಾಗಿತ್ತು. ಮೃತರು ಪತಿ ಹೂವಯ್ಯ ಗೌಡ, ಪುತ್ರ ಗಗನ್, ಪುತ್ರಿ ಪಲ್ಲವಿ, ಅಳಿಯ ಮೋಹಿತ್ ಕಾಳಮ್ಮನೆ, ಮೊಮ್ಮಗಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ನಾಳೆ (ಫೆ.19)ರಂದು ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.