ಕೊಯನಾಡು ಕಾರು – ಬಸ್ ಅಪಘಾತ : ಜಖಂ

0

ಕಾರು ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್ಸು ಮುಖಾಮುಖಿ ಢಿಕ್ಕಿ ಹೊಡೆದು ಎರಡೂ ವಾಹನಗಳು ಜಖಂಗೊಂಡ ಘಟನೆ ಕೊಡಗು ಸಂಪಾಜೆ ಗ್ರಾಮದ ಕೊಯನಾಡಿನಲ್ಲಿ ಫೆ.18ರಂದು ಅಪರಾಹ್ನ ಸಂಭವಿಸಿದೆ.

ಮಡಿಕೇರಿಯಿಂದ ಧರ್ಮಸ್ಥಳಕ್ಕೆ ಬರುವ ಬಸ್ ಮತ್ತು ಮಡಿಕೇರಿಗೆ ತೆರಳುವ ಕಾರಿನ ನಡುವೆ ಕೊಯನಾಡಿನಲ್ಲಿ ಅಪಘಾತ ಸಂಭವಿಸಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಕಾರು ಮತ್ತು ಬಸ್ಸಿನ ಮುಂಭಾಗ ಜಖಂಗೊಂಡಿದೆ ಎಂದು ತಿಳಿದುಬಂದಿದೆ.