ಆಲೆಟ್ಟಿ: ಪಂಜಿಮಲೆಯಲ್ಲಿ ಭಕ್ತಿ ಸಂಭ್ರಮದ ವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಶಿವದೂತೆ ಗುಳಿಗೆ ಯಕ್ಷಗಾನ ಬಯಲಾಟ ಪ್ರದರ್ಶನ

ಆಲೆಟ್ಟಿ ಪಂಜಿಮಲೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಫೆ.19 ರಂದು ಕೂಡಿ ಮರುದಿನ ಪ್ರಾತ: ಕಾಲ ಒತ್ತೆಕೋಲ ಮಜಲಿನಲ್ಲಿ ನಡೆಯಿತು.

ರಾತ್ರಿ ಗುಂಡ್ಯ ಶ್ರೀ ವಯನಾಟ್ ಕುಲವನ್ ದೈವಸ್ಥಾನದಿಂದ ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಮತ್ತು ವಯನಾಟ್ ಕುಲವನ್ ದೈವದ ದರ್ಶನ ಪಾತ್ರಿ ಶಿವರಾಮ ಗೂಡಿಂಜ ರವರ ನೇತೃತ್ವದಲ್ಲಿ
ಶ್ರೀ ದೈವಗಳ ಭಂಡಾರ ಆಗಮಿಸಿ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು.


ನಂತರಶ್ರೀ ಸದಾಶಿವ ಭಜನಾ ಸಂಘದ ಸದಸ್ಯರಿಂದ ಭಜನಾ ಸೇವೆಯು ದೈವದ ಸಾನಿಧ್ಯದಲ್ಲಿ ಜರುಗಿತು. ಬಳಿಕ ಶ್ರೀ ದೈವದ ಕುಲ್ಚಾಟವು ನಡೆಯಿತು. ಮರುದಿನ ಪ್ರಾತ:ಕಾಲ ವಿಷ್ಣುಮೂರ್ತಿ ದೈವದ ಅಗ್ನಿ ಸೇವೆಯು ನಡೆಯಿತು. ಬಳಿಕ ಮಾರಿಕಳ ಪ್ರವೇಶವಾಗಿ ಅರಸಿನ ಪ್ರಸಾದ ವಿತರಣೆಯಾಯಿತು.
ರಾತ್ರಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಪ್ಪನಾಡು ಮೇಳದವರಿಂದ ಶಿವದೂತೆ ಗುಳಿಗೆ ಎಂಬ ತುಳು ಯಕ್ಷಗಾನ ಪ್ರದರ್ಶನವಾಯಿತು. ಭಾರತೀಯ
ತೀಯ ಸಮಾಜ ಬಾಂಧವರು ದೈವದ ಸೇವೆಯಲ್ಲಿ ಪಾಲ್ಗೊಂಡರು.


ದೇವಳದ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ, ಸಮಿತಿಯ ಗೌರವಾಧ್ಯಕ್ಷ ರಾಮಯ್ಯ ಗೌಡ ಗುಂಡ್ಯ,ಅಧ್ಯಕ್ಷ ಸುಧಾಕರ ಆಲೆಟ್ಟಿ, ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಕೋಶಾಧಿಕಾರಿ ಶ್ರೀನಾಥ್ ಆಲೆಟ್ಟಿ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು, ಭಜನಾ ಸಂಘದಪದಾಧಿಕಾರಿಗಳು,ಸದಸ್ಯರುಸಹಕರಿಸಿದರು.
ಭಕ್ತಾದಿಗಳಿಂದ ತುಲಾಭಾರ ಸೇವೆ ಮತ್ತು ಹರಕೆಸಮರ್ಪಣೆಯಾಯಿತು. ಆಗಮಿಸಿದ ಭಕ್ತಾದಿಗಳಿಗೆ ಪರಿವಾರ ಲಕ್ಷ್ಮಣ ಗೌಡ ಮತ್ತು ಸಹೋದರರಿಂದ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಊರಿನ ಹಾಗೂ ಪರ ಊರಿನ ಭಗವದ್ಭಕ್ತರು ಆಗಮಿಸಿದ್ದರು.